ಸರ್ಕಾರಕ್ಕೆ 14 ಕೋಟಿ ರೂ. GST ವಂಚನೆ : ಓರ್ವ ಅರೆಸ್ಟ್

ಶಿವಮೊಗ್ಗ : ನಕಲಿ ಜಿ.ಎಸ್.ಟಿ ಬಿಲ್ ಸೃಷ್ಠಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂ. ತೆರಿಗೆ ವಂಚಿಸಿದ್ದ ಜಾಲವನ್ನು ಭೇದಿಸಿರುವ ಮೈಸೂರಿನ ಕೇಂದ್ರೀಯ ತೆರಿಗೆ ಜಿ.ಎಸ್.ಟಿ ಕಚೇರಿಯ ಸಿಬ್ಬಂದಿ ಮೈಸೂರಿನ ರಬ್ ಟ್ರೇಡರ್ ನ ಮಾಲೀಕರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿರುತ್ತಾರೆ ಎಂದು ಉಪ ಆಯುಕ್ತರು, ಸೆಂಟ್ರಲ್ ಟ್ಯಾಕ್ಸ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೊರ ರಾಜ್ಯಗಳಿಂದ ಮೈಸೂರಿಗೆ ತರಿಸುವ ಸರಕು ಹಾಗೂ ಮೈಸೂರಿನಿಂದ ಹೊರರಾಜ್ಯಗಳಿಗೆ ಕಳುಹಿಸುವ ಸರಕುಗಳ ಸಂಬಮಧ ನಕಲಿ ಬಿಲ್‍ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ 14 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ವಂಚಿಸಿದ್ದು, ಯಾವುದೇ ಅಧಿಕೃತ ರಶೀದಿ ಇಲ್ಲದೇ ನಕಲಿ ಘಟಕಗಳಿಗೆ ಸರಕು ಸಾಗಾಣೆ ಮಾಡಿರುವಂತೆ ತೋರಿಸ ಕೋಟ್ಯಂತರ ರೂ.ಗಳ ವಹಿವಾಟು ಕೇವಲ ಕಾಗದ ಮೇಲೆ ನಡೆದಿದೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೈಸೂರಿನ ಕೇಂದ್ರೀಯ ಜಿಎಸ್‍ಟಿ ಆಯುಕ್ತಾಲಯದ ಅಧಿಕಾರಿಗಳು ವಂಚನೆಯ ಜಾಲವನ್ನು ಭೇದಿಸಿದೆ ಎಂದು ಉಪ ಆಯುಕ್ತರು, ಸೆಂಟ್ರಲ್ ಟ್ಯಾಕ್ಸ್ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Latest Indian news

Popular Stories