ಶಿವಮೊಗ್ಗ; ನ.25ರಿಂದ 3 ಮಾರ್ಗದಲ್ಲಿ ವಿಮಾನ ಹಾರಾಟ

ಶಿವಮೊಗ್ಗ :ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ಸದ್ಯ ಬೆಂಗಳೂರು ನಗರಕ್ಕೆ ಮಾತ್ರ ವಿಮಾನ ಸೇವೆ ಇದೆ. ನವೆಂಬರ್‌ನಲ್ಲಿ ಇನ್ನೂ 3 ಮಾರ್ಗದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.

ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಫೇಸ್‌ಬುಕ್ ಪೋಸ್ಟ್‌ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಎರಡು ಅಪ್‌ಡೇಟ್ ನೀಡಿದ್ದಾರೆ. ಇದರಲ್ಲಿ ರಾತ್ರಿ ವೇಳೆ ವಿಮಾನ ಲ್ಯಾಂಡ್ ಆಗುವ ಸೌಲಭ್ಯ, ಹೊಸ ಮಾರ್ಗದಲ್ಲಿ ವಿಮಾನ ಸಂಚಾರದ ಮಾಹಿತಿ ಸೇರಿದೆ.

ಸಂಸದರ ಫೇಸ್‌ಬುಕ್ ಪೋಸ್ಟ್ ಸಂಸದ ಬಿ. ವೈ. ರಾಘವೇಂದ್ರ ಫೇಸ್‌ಬುಕ್‌ ಪೋಸ್ಟ್‌ನಲ್ಲಿ, ‘ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲು ಸಜ್ಜಾಗುತ್ತಿದೆ ಶಿವಮೊಗ್ಗ ವಿಮಾನ ನಿಲ್ದಾಣ. ರಾತ್ರಿ ವೇಳೆಯೂ ಇಲ್ಲಿಂದ ಹಾರಲಿವೆ ವಿಮಾನಗಳು’ ಎಂದು ಹೇಳಿದ್ದಾರೆ.

‘ಡಿಸೆಂಬರ್ ವೇಳೆಗೆ ಶಿವಮೊಗ್ಗ ವಿಮಾನ ನಿಲ್ದಾಣ ತನ್ನ ಸಂಚಾರ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ. ಇನ್ನೆರಡು ತಿಂಗಳಲ್ಲಿ ರಾತ್ರಿ ವೇಳೆಯೂ ಇಲ್ಲಿಂದ ವಿಮಾನಗಳ ಹಾರಾಟ ಶುರುವಾಗಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ನೈಟ್ ಲ್ಯಾಂಡಿಂಗ್‌ಗೆ 2ನೇ ಹಂತದ ಒಪ್ಪಿಗೆಯೂ ಸಿಕ್ಕಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

Latest Indian news

Popular Stories