THG EXCLUSIVE | ಚುನಾವಣೆ ಮುಕ್ತಾಯದ ಬೆನ್ನಲ್ಲೇ ಆಕ್ಟಿವ್ ಆದ ಶಾಸಕ; ಕೊನೆಗೂ ಖೂಬಾ ಪರ ಪ್ರಚಾರ ನಡೆಸದ ಚವಾಣ್

ಲೋಕಸಭಾ ಚುನಾವಣೆ ಮುಕ್ತಾಯ ಬೆನ್ನಲ್ಲೇ ಬೀದರ್ ಜಿಲ್ಲೆ ಔರಾದ್ ಶಾಸಕ ಪ್ರಭು ಚವಾಣ್ ಕ್ಷೇತ್ರದಲ್ಲಿ ಆಯಕ್ಟಿವ್ ಆಗಿದ್ದಾರೆ. ಅನಾರೋಗ್ಯ ಕಾರಣ ಕಳೆದ ಹಲವು ದಿನಗಳಿಂದ ಕ್ಷೇತ್ರದ ಜನರಿಂದ ದೂರವಿದ್ದ ಚವಾಣ್ ಇದೀಗ ಕ್ಷೇತ್ರದಲ್ಲಿ ಸಕ್ರಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಔರಾದ್ ತಾಲೂಕಿನ ಬೋಂತಿ ತಾಂಡಾದ ಕಚೇರಿಗೆ ಭೇಟಿ ನೀಡಿ ಕಾಲ ಕಳೆದಿದ್ದಾರೆ. ಹಾಲಿ ಸಂಸದರ ಭಗವಂತ್ ಖೂಬಾಗೆ ಟಿಕೆಟ್ ಸಿಕ್ಕ ಬಳಿಕ ಚುನಾವಣಾ ಪ್ರಚಾರದಿಂದ ಪ್ರಭು ಚವಾಣ್ ಉಳಿದಿದ್ದರು. ಸ್ವಕ್ಷೇತ್ರ ಔರಾದ್ ಬಿಟ್ಟು ಮುಂಬೈನ ನಿವಾಸದಲ್ಲಿ ವಾಸವಾಗಿದ್ದರು. ಇದೀಗ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಮತ್ತೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.

ಭಗವಂತ್‌ ಖೂಬಾ ಪರ ಒಂದು ದಿನವೂ ಶಾಸಕ ಪ್ರಭು ಚವಾಣ್ ಪ್ರಚಾರ ಮಾಡಲಿಲ್ಲ. ಪ್ರಭು ಚೌಹಾಣ್ ಎಲೆಕ್ಷನ್ ಹೊತ್ತಲ್ಲಿ ಖೂಬಾಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದರು. ಎಲೆಕ್ಷನ್ ಮುಕ್ತಾಯದ ಮರು ದಿನವೇ ಚೌಹಾಣ್ ಕ್ಷೇತ್ರಕ್ಕೆ ಮರಳಿದ್ದಾರೆ.

ಮುಂಬೈನಲ್ಲಿದ್ದ ಪ್ರಭು ಚವಾಣ್

ಭಗವಂತ್ ಖೂಬಾಗೆ ಟಿಕೆಟ್ ನೀಡಬಾರದು ಎಂದು ಪ್ರಭು ಚವಾಣ್ ಪಟ್ಟು ಹಿಡಿದಿದ್ದರು. ಆದರೂ ಹೈಕಮಾಂಡ್ ಚವಾಣ್ ಅವರಿಗೆ ಮತ್ತೊಂದು ಅವಕಾಶ ನೀಡಿತ್ತು. ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ ಪ್ರಭು ಚವಾಣ್ ಇದೀಗ ಕ್ಷೇತ್ರಕ್ಕೆ ಹಿಂದಿರುಗಿದ್ದಾರೆ.

ಬಿಜೆಪಿಯಿಂದ ಭಗವಂತ್ ಖುಬಾ ಸ್ಪರ್ಧೆ ಮಾಡಿದ್ರೆ, ಕಾಂಗ್ರೆಸ್ನಿಂದ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಸ್ಪರ್ಧಿಸಿದ್ದಾರೆ. ಬೀದರ್ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆದಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಖುಬಾ ವಿರುದ್ಧ ಕೊಲೆ ಯತ್ನದ ಆರೋಪ

ನನ್ನನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಲು ಭಗವಂತ್ ಖೂಬಾ ಸಾಕಷ್ಟು ಪ್ರಯತ್ನ ಮಾಡಿದ್ದರು. ನನ್ನ ಹತ್ಯೆಗೆ ಭಗವಂತ್ ಖೂಬಾ ಸಂಚು ಮಾಡುತ್ತಿದ್ದಾರೆ ಎಂದು ಪ್ರಭು ಚವಾಣ್ ಗಂಭೀರ ಆರೋಪ ಮಾಡಿದ್ದರು.

ಭಗವಂತ ಖೂಬಾಗೆ ಕೋಪವಿದ್ದರೆ ಗುಂಡಿಕ್ಕಿ ಹತ್ಯೆಮಾಡಲಿ. ಈ ಹಿಂದೆ 15 ಗೂಂಡಾಗಳನ್ನ ಬಿಟ್ಟು ಹತ್ಯೆಗೆ ಯತ್ನಿಸಿದ್ದರು. ಈಗ ರಸ್ತೆ ಮಧ್ಯೆ ಗುಂಡಿಕ್ಕಿ ಕೊಲ್ಲಲು ಸಂಚು ಮಾಡಿದ್ದಾರೆ. ಕೇಂದ್ರ ಸಚಿವಲರ ಬೆಂಬಲಿಗರಿಂದಲೇ ನನಗೆ ಗೊತ್ತಾಗಿದೆ. ನನ್ನ ಕೊಂದು ಬೈ ಎಲೆಕ್ಷನ್ ಮಾಡಿಸುವ ಮಹದಾಸೆ ಎಂದು ನೇರವಾಗಿ ಹೆಸರು ಹೇಳಿ ಆರೋಪಿಸಿದ್ದರು.

Latest Indian news

Popular Stories