ಆಲಿವ್ ಮರ ಮತ್ತು ವೀಲ್ ಚೇರ್ …..ಹೃದಯ ತಟ್ಟುವ ಕೃತಿ

-. ಜಿ.ಎಂ. ಶರೀಫ್ ಹೂಡೆ

ಆತ್ಮೀಯ ಕವಿ, ಲೇಖಕರು ಮತ್ತು ರಂಗ ನಿರ್ದೇಶಕರಾದ ವಸಂತ ಬನ್ನಾಡಿ ಇವರು ಬರೆದಿರುವ ಆಲಿವ್ ಮರ ಮತ್ತು ವೀಲ್ ಚೇರ್ (ಪ್ಯಾಲೆಸ್ಟೀನ್ ಕವಿತೆಗಳು) ನಿನ್ನೆಯಷ್ಟೆ ಕೈ ಸೇರಿದೆ. ಸಂಜೆ ಹೊತ್ತಿಗೆ ಮನೆಗೆ ಬಂದವನೇ ಅಂಚೆ ಕವರನ್ನು ತೆರೆದು ಪುಸ್ತಕದ ಮೇಲೊಂದು ದೃಷ್ಟಿ ಹಾಯಿಸಿದೆ. ಪುಸ್ತಕದ ಮುಖಪುಟ, ಮುದ್ರಣ ಸುಂದರವಾಗಿ ಮೂಡಿಬಂದಿದೆ. ಶೀರ್ಷಿಕೆಯೂ ಅರ್ಥವತ್ತಾಗಿದೆ. ವಿಷಯಗಳು ಎಷ್ಟು ಆಪ್ತ ಮತ್ತು ಆಕರ್ಷಕವೆಂದರೆ ಒಂದಷ್ಟು ಹೊತ್ತು ಅಲ್ಲೇ ಓದುತ್ತಾ ಕುಳಿತುಬಿಟ್ಟೆ.

1000795469 Special Stories

ಪ್ಯಾಲೆಸ್ಟೈನ್ ಇತಿಹಾಸದ ಕರಾಳ ಅಧ್ಯಾಯಗಳನ್ನು ಒಂದೊಂದಾಗಿ ಕಣ್ಣೆದುರಿಗೆ ತೆರೆದಿಡುತ್ತಾ ಹೋದ ಈ ಕೃತಿ ಹಲವಾರು ವಾಸ್ತವಿಕತೆಗಳನ್ನು ತೆರೆದು ಮುಂದಿಟ್ಟಿದೆ. “ಕವಿಯ ಹೆಜ್ಜೆ ಗುರುತು” ನೊಂದಿಗೆ ಆರಂಭವಾಗುವ ಕವನದ ಸಾಲುಗಳು “ಅವರು ಕೇಳದೇ ಒಳ ಬಂದಿರುವವರು” ಎಂಬ ಎರಡನೇ ಕವನಕ್ಕೆ ಕಾಲಿಟ್ಟಾಗಲೇ ಇತಿಹಾಸ ಕಂಡ ಕ್ರೌರ್ಯದ ಕರಾಳ ಮುಖವನ್ನು ಅನಾವರಣಗೊಳಿಸುತ್ತದೆ. ಅದರ ನಂತರದ ಶೀರ್ಷಿಕೆಗಳು (ಕವನಗಳು) ಯುದ್ಧ ಪೀಡಿತ ರಾಷ್ಟ್ರವೊಂದರ ಅಮಾಯಕರ ಬದುಕಿನ ನಿತ್ಯದ ಪಾಡು, ಹಾಡು…. ಅದನ್ನು ಇನ್ನಷ್ಟೆ ಓದಬೇಕಿದೆ.

ಅದೇನಿದ್ದರೂ ಪ್ಯಾಲೆಸ್ಟೀನಿಯರು ಅನುಭವಿಸುತ್ತಿರುವ ದೈನಂದಿನ ಸಂಕಟಗಳು, ಯುದ್ಧ, ಸಾವುನೋವು, ನಾಶ ನಷ್ಟಗಳ
ದುರಂತ ವಿದ್ಯಮಾನಗಳನ್ನು ಕಣ್ಣಿಗೆ ಕಟ್ಟುವಂತೆ ಓದುಗರ ಮುಂದಿಡುವಲ್ಲಿ ಈ ಕೃತಿ ಯಶಸ್ವಿಯಾಗಿದೆ. ಹಲವು ಪುಟಗಳ ಪುಸ್ತಕಗಳು ಹೇಳಬಲ್ಲ ವಿಷಯಗಳನ್ನು ಕವನದ ಪ್ರತಿ ಸಾಲುಗಳು ಪ್ರತಿಧ್ವನಿಸುತ್ತದೆ, ಹೃದಯವನ್ನು ತಟ್ಟುತ್ತದೆ. ಈ ಬಗೆಯ ಸಂವೇದನೆಯುಳ್ಳ ಕೃತಿಯೊಂದರ ಮೂಲಕ ವಾಸ್ತವ ದರ್ಶನ ಮಾಡಿಸಿದ ಆತ್ಮೀಯರಾದ ವಸಂತ ಬನ್ನಾಡಿ ಇವರಿಗೆ ಅಭಿನಂದನೆಗಳು, ಧನ್ಯವಾದಗಳು. (ಪುಸ್ತಕಕ್ಕಾಗಿ ಸಂಪರ್ಕ : +91 70191 82729)

Latest Indian news

Popular Stories