ಏಷ್ಯಾ ಕಪ್ 2023: ಆಫ್ಘಾನಿಸ್ತಾನವನ್ನು 89 ರನ್ ಗಳಿಂದ ಮಣಿಸಿದ ಬಾಂಗ್ಲಾದೇಶ!

ಏಷ್ಯಾ ಕಪ್ 2023ರ ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 89 ರನ್ ಗಳಿಂದ ಮಣಿಸಿದ್ದು ಟೂರ್ನಿಯನ್ನು ಜೀವಂತವಾಗಿರಿಸಿಕೊಂಡಿದೆ.

ಪಾಕಿಸ್ತಾನದ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 89 ರನ್‌ಗಳಿಂದ ಜಯಗಳಿಸಿತು. ಈ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 334 ರನ್ ಗಳಿಸಿತು. ಮೆಹಿದಿ ಹಸನ್ ಮತ್ತು ನಜ್ಮುಲ್ ಶಾಂಟೊ ಭರ್ಜರಿ ಬ್ಯಾಟಿಂಗ್‌ನಲ್ಲಿ ಶತಕ ಬಾರಿಸಿದರು. 

ಬಾಂಗ್ಲಾ ಪರ ಮೆಹದಿ ಹಸನ್ 112 ಮತ್ತು ನಜ್ಮುಲ್ ಶಾಂಟೊ 104 ರನ್ ಗಳಿಸಿದರು. ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ತಂಡ 44.3 ಓವರ್‌ಗಳಲ್ಲಿ 245 ರನ್‌ಗಳಿಗೆ ಆಲೌಟ್ ಆಯಿತು. ಬಾಂಗ್ಲಾ ಪರ ತಸ್ಕಿನ್ ಅಹ್ಮದ್ 8.3 ಓವರ್‌ಗಳಲ್ಲಿ 4/44 ಪಡೆದರು. ಶೋರಿಫುಲ್ ಇಸ್ಲಾಂ 9 ಓವರ್‌ಗಳಲ್ಲಿ 36 ರನ್ ನೀಡಿ 3 ವಿಕೆಟ್ ಪಡೆದರು.

ಏಷ್ಯಾಕಪ್ ಗ್ರೂಪ್ ಬಿ ನಲ್ಲಿ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಗೆಲ್ಲುವ ಮೂಲಕ ಬಾಂಗ್ಲಾದೇಶ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Latest Indian news

Popular Stories