ಗೋಣಿಕೊಪ್ಪಲಿನ ಉದ್ಯಮಿ ಅನೀಶ್ ಮಾದಪ್ಪ ಅವರ ಮನೆಯ ಅಂಗಳದಲ್ಲಿ ಸೈಕಲಿಂಗ್ ಮಾಡುತ್ತ ಪುತ್ರ ಆಯುಷ್ ಆಟವಾಡುತ್ತಿದ್ದ ವೇಳೆ ಗುಂಡು ಹಾರಿಸಿರುವ ಪ್ರಕರಣ ಸಂಬಂಧಿಸಿದಂತೆ ದೂರುದಾರರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ.
ಗುಂಡು ತಪ್ಪಿ ಗೂಡಿನಲ್ಲಿದ್ದ ನಾಯಿಗಳಿಗೆ ತಗುಲಿದ ಪರಿಣಾಮ 3 ನಾಯಿಗಳಿಗೆ ಗಂಭೀರ ಗಾಯವಾಗಿದೆ ಎಂದು ದೂರದಾರರು ತಿಳಿಸಿದ್ದಾರೆ.
ಪ್ರಕರಣ ನಡೆದು 5 ತಾಸುಗಳ ನಂತರ ಒಂದು ನಾಯಿ ಮೃತಪಟ್ಟಿದ್ದು ಉಳಿದ ಎರಡು ನಾಯಿಗಳು ಗಂಭೀರ ಸ್ಥಿತಿಯಲ್ಲಿವೆ ಎಂದು ಹೇಳಲಾಗಿದೆ.
ಶ್ರೀಮಂಗಲ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದ್ದು , ತಮ್ಮ ನೆರೆಮನೆಯ ಎ.ಟಿ.ಸೋಮಣ್ಣ ವಿರುದ್ಧ ಕೊಲೆ ಪ್ರಯತ್ನದ ದೂರನ್ನು ದಾಖಲಿಸಿಕೊಂಡಿರುವ ಶ್ರೀಮಂಗಲ ಪೊಲೀಸರು ಆರೋಪಿಯ ಪತ್ತೆಗಾಗಿ ಶೋದ ನಡೆಸುತ್ತಿದ್ದಾರೆ.