ಹೈಬ್ರೀಡ್ ಮಾದರಿಗೆ ನಕಾರ: ಪಾಕಿಸ್ತಾನ ಇಲ್ಲದೆ ಏಷ್ಯಾಕಪ್?

ಇಸ್ಲಮಾಬಾದ್: ಈ ಬಾರಿಯ ಏಷ್ಯಾಕಪ್‌ ಪಾಕಿಸ್ತಾನವಿಲ್ಲದೇ ನಡೆಯುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷರು ದಿಢೀರನೇ ಬದಲಾಗಿದ್ದು, ಹೊಸ ಅಧ್ಯಕ್ಷ ಝಾಕಾ ಅಶ್ರಫ್, ಹೈಬ್ರಿಡ್‌ ಮಾದರಿ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಪಾಕಿಸ್ತಾನವನ್ನು ಹೊರಗಿಟ್ಟು ಏಷ್ಯಾಕಪ್‌ ನಡೆಸುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.

ಈ ಮೊದಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷರಾಗಿದ್ದ ನಜಮ್‌ ಸೇಥಿ, ಹೈಬ್ರಿಡ್‌ ಮಾದರಿ ಏಷ್ಯಾಕಪ್‌ಗೆ ಒಪ್ಪಿಗೆ ನೀಡಿದ್ದರು. ಈ ಪ್ರಕಾರವಾಗಿ ಪಾಕಿಸ್ತಾನದಲ್ಲಿ ನಾಲ್ಕು, ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುವ ಬಗ್ಗೆ ನಿರ್ಧಾರವಾಗಿತ್ತು.

ಆದರೆ, ಬುಧವಾರ ನಜಮ್‌ ಸೇಥಿ ಅವರು ರಾಜೀನಾಮೆ ನೀಡಿದ್ದು, ಝಾಕಾರನ್ನು ಪಾಕ್‌ ಪ್ರಧಾನಿ ನೇಮಕ ಮಾಡಿದ್ದಾರೆ. ಝಾಕಾ ಅವರು ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದು, ಹೈಬ್ರಿಡ್‌ ಮಾದರಿ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಅಲ್ಲದೆ, ಪಾಕಿಸ್ತಾನದಲ್ಲೇ ಸಂಪೂರ್ಣ ಏಷ್ಯಾಕಪ್‌ ನಡೆಯಬೇಕು ಎಂದೂ ಪ್ರತಿಪಾದಿಸಿದ್ದಾರೆ. ಹೀಗಾಗಿ, ಏಷ್ಯಾಕಪ್‌ ಮತ್ತೂಮ್ಮೆ ತೂಗುಯ್ನಾಲೆಗೆ ಬಿದ್ದಂತಾಗಿದ್ದು, ಹೆಚ್ಚು ಕಡಿಮೆ ಪಾಕಿಸ್ತಾನವನ್ನು ಹೊರಗಿಟ್ಟು ನಡೆಸಬಹುದು ಎನ್ನಲಾಗುತ್ತಿದೆ.

Latest Indian news

Popular Stories