ಗಾಂಜಾ ಸಂಬಂಧಿತ ಕೊಲೆ ಪ್ರಕರಣ: ಇಬ್ಬರ ಬಂಧನ

Crime News (THG Kannada)

ಚಿಕ್ಕಮಗಳೂರು, ಜೂ.22: ಪ್ರವಾಸಿ ತಾಣ ದೇವರಮನೆ ಬಳಿ ಯುವಕನೊಬ್ಬನ ಶವವನ್ನು ಎಸೆದು ಕೊಲೆಗೈದ ಪ್ರಕರಣವನ್ನು ಭೇದಿಸಿದ ಪೊಲೀಸರು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಬಂಟ್ವಾಳ ತಾಲೂಕಿನ ಮೊಹಮ್ಮದ್ ಸವಾದ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಮೂಲದ ರಿಝ್ವಾನ್ ಮತ್ತು ಜೈನುಲ್ಲಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ಗಾಂಜಾ ದಂಧೆಯಿಂದ ಇವರ ಕೊಲೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪಡುಬಿದ್ರಿಯ ಬೆಂಗ್ರೆಯಲ್ಲಿ ಸವಾದ್‌ನನ್ನು ಕೊಲೆ ಮಾಡಿ ಶವವನ್ನು ದೇವರಮನೆಯಲ್ಲಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

Latest Indian news

Popular Stories