
Sports
ಒಲಿಂಪಿಕ್ಸ್:ಸೆಮಿ ಫೈನಲ್ ಪ್ರವೇಶಿಸಿದ ಭಾರತದ ಹಾಕಿ ತಂಡ !
ಟೋಕಿಯೊ: ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ಪುರುಷರ ತಂಡ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದು ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.
ಇಂದು ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಹಾಕಿ ಪುರುಷರ ತಂಡ 3-1 ಗೋಲುಗಳಿಂದ ಗೆಲುವು ಸಾಧಿಸಿದೆ.
ದಿಲ್ಪ್ರೀತ್ ಸಿಂಗ್(7ನೇ ನಿಮಿಷ), ಗುರ್ಜಂತ್ ಸಿಂಗ್ (16ನೇ) ಮತ್ತು ಹಾರ್ದಿಕ್ ಸಿಂಗ್ (57ನೇ) ಮೂಲಕ ಭಾರತವು ಮೂರು ಗೋಲುಗಳನ್ನು ಗಳಿಸಿ ಎಂಟು ಬಾರಿ ಒಲಂಪಿಕ್ಸ್ ಚಾಂಪಿಯನ್ ತಂಡ ಮತ್ತೊಂದು ಪದಕದ ಭರವಸೆ ಮೂಡಿಸಿದೆ.




