ರಣರೋಚಕ ಪಂದ್ಯದಲ್ಲಿ ವಿಶ್ವಕಪ್ ಗೆದ್ದ ಭಾರತ

ಟಿ 20 ವಿಶ್ವಕಪ್ ನ್ನು ದ.ಆಫ್ರಿಕಾವನ್ನು ಮಣಿಸಿ ಗೆದ್ದುಕೊಂಡಿದೆ. ಒಂದು ಹಂತದಲ್ಲಿ ಗೆಲುವಿನ‌ ಸಮೀಪ ಇದ್ದ ದಕ್ಷಿಣ ಆಫ್ರಿಕಾ ಕೊನೆಯಲ್ಲಿ ಪ್ರಮುಖ ವಿಕೆಟ್ ಗಳನ್ನು ಉದುರಿಸಿಕೊಂಡು ಸೋಲೊಪ್ಪಿಕೊಂಡಿದೆ.

16ನೇ ಓವರ್‌ನ ಮೊದಲ ಎಸೆತದಲ್ಲಿ ಹೆನ್ರಿಕ್ ಕ್ಲಾಸೆನ್ ಔಟಾಗುವ ಮೂಲಕ ಸೌತ್ ಆಫ್ರಿಕಾದ ಹಿಡಿತ ಕೈ ತಪ್ಪಿತು. ಈ ಮೂಲಕ ಭಾರತ ಮತ್ತೆ ಪುಟಿದೆದ್ದು ಬಂದು ಬುನ್ರಾ, ಅರ್ಶದೀಪ್ ಮತ್ತು ಹಾರ್ದಿಕ್ ದಾಳಿಗೆ ಸಿಲುಕಿ ದಕ್ಷಿಣ ಆಫ್ರಿಕಾ ಚೊಚ್ವಲ ವಿಶ್ವಕಪ್ ಗೆಲ್ಲುವ ಅವಕಾಶ ಕೈಚೆಲಿತು.

ಭಾರತ ಈ ಮೂಲಕ 13 ವರ್ಷದ ಕಾಯುವಿಕೆಗೆ ತೀಲಾಂಜಲಿ ಹಾಡಿ ವಿಶ್ವಕಪ್ ಮುಡಿಗೇರಿಸಿಕೊಂಡಿದೆ.

ಈಮೂಲಕ ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ರೋಚಕವಾಗಿ ಏಳು ರನ್‌ಗಳಿಂದ ಸೋಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ಉತ್ತರವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 169 ರನ್ ಗಳಿಸಲಷ್ಟೇ ಶಕ್ತವಾಯಿತು.

Latest Indian news

Popular Stories