ಉಡುಪಿ: ಗೋಕಳ್ಳತನ‌ ಪ್ರಕರಣ – ಇಬ್ಬರ ಬಂಧನ

ಉಡುಪಿ: ಜೂನ್ 25 ರಂದು ರಾತ್ರಿ 1:48 ಗಂಟೆಗೆ ಶಂಕರನಾರಾಯಣ ಠಾಣಾ ವ್ಯಾಪ್ತಿಯ ಶಂಕರನಾರಾಯಣ ಪೇಟೆಯಲ್ಲಿ ನಡೆದ ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಶಂಕರನಾರಾಯಣ ಪೋಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಅಪರಾಧ ಕ್ರಮಾಂಕ 63/2024ರಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಮಂಗಳೂರು ಆಸೈಗೋಳಿ ಎಂಬಲ್ಲಿನ 1) ನಿಝಾಮುದ್ದೀನ್ ಎ ಎಚ್, 2) ಮಹಮ್ಮದ್ ಅನ್ಸಾರ್ ಎಂಬವರನ್ನು ಜೂನ್ 29 ರಂದು ಶಂಕರನಾರಾಯಣ ಠಾಣಾ ಪಿಎಸ್ಐರವರಾದ ನಾಸೀರ್ ಹುಸೇನ್ ಮತ್ತು ಶಂಭುಲಿಂಗಯ್ಯ ಎಮ್.ಇ. ಹಾಗೂ ಸಿಬ್ಬಂದಿಯವರು ದಸ್ತಗಿರಿ ಮಾಡಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ದಸ್ತಗಿರಿ ಮಾಡಿದ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

Latest Indian news

Popular Stories