IPL ; ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಗೆ ಜಯ

ಚಂಡೀಗಢ: ಇಲ್ಲಿನ ಮುಲ್ನಾಪುರದಲ್ಲಿ ನೂತನವಾಗಿ ನಿರ್ಮಿಸಲಾದ “ಮಹಾರಾಜ ಯಾದವೀಂದ್ರ ಸಿಂಗ್‌ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ಶನಿವಾರ ನಡೆದ ಐಪಿಎಲ್‌ ಮುಖಾಮುಖಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ವಿರುದ್ಧ ಪಂಜಾಬ್‌ ಕಿಂಗ್ಸ್‌ ಜಯ ಸಾಧಿಸಿದೆ.

ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಡೆಲ್ಲಿ 9 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ 19.2 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 177 ರನ್ ಗಳಿಸಿ 4 ವಿಕೆಟ್ ಗಳ ಜಯ ಸಾಧಿಸಿತು.

ನಾಯಕ ಶಿಖರ್ ಧವನ್ 22 ರನ್, ಜಾನಿ ಬೈರ್‌ಸ್ಟೋ 9 ರನ್ ಗಳಿಸಿ ಔಟಾದರು. ಪ್ರಭ್ ಸಿಮ್ರಾನ್ ಸಿಂಗ್ 26, ಅಮೋಘ ಆಟವಾಡಿದ ಸ್ಯಾಮ್ ಕರ್ರಾನ್ 47 ಎಸೆತಗಳಲ್ಲಿ 63 ರನ್ ಗಳಿಸಿ ಔಟಾದರು. ಜಿತೇಶ್ ಶರ್ಮ 9 ರನ್ ಗೆ ನಿರ್ಗಮಿಸಿದರು. ರೋಚಕ ಪಂದ್ಯದಲ್ಲಿ ಪಂಜಾಬ್ ಗೆ ಗೆಲ್ಲಲು ಕೊನೆಯ 6 ಎಸೆತಗಳಲ್ಲಿ 6 ರನ್ ಗಳ ಅಗತ್ಯವಿತ್ತು. ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಲಿಯಾಮ್ ಲಿವಿಂಗ್ಸ್ಟೋನ್ 21 ಎಸೆತಗಳಲ್ಲಿ 38 ರನ್ ಗಳಿಸಿ ಔಟಾಗದೆ ಉಳಿದರು.
ಪುನರಾಗಮನದ ಪಂದ್ಯ ಆಡಿದ ಡೆಲ್ಲಿ ನಾಯಕ ರಿಷಭ್ ಪಂತ್13 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. 2 ಬೌಂಡರಿಗಳನ್ನು ಅವರು ಬಾರಿಸಿದರು. ವಾರ್ನರ್ 29, ಮಿಚೆಲ್ ಮಾರ್ಷ್ 20, ಶಾಯ್ ಹೋಪ್ 33, ಅಕ್ಷರ್ ಪಟೇಲ್ 21 ರನ್ ಗಳಿಸಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಅಭಿಷೇಕ್ ಪೊರೆಲ್ 10 ಎಸೆತಗಳಲ್ಲಿ 32 ರನ್ ಚಚ್ಚಿ ಔಟಾಗದೆ ಉಳಿದು ಗಮನ ಸೆಳೆದರು.

Latest Indian news

Popular Stories