ವಿಶಾಖಪಟ್ಟಣದಲ್ಲಿ ಜೈಸ್ವಾಲ್ ಯಶಸ್ವಿ ದ್ವಿಶತಕ

ವಿಶಾಖಪಟ್ಟಣ: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಇಂದು ದ್ವಿಶತಕ ಪೂರೈಸಿದ್ದಾರೆ. ತಮ್ಮ ಟೆಸ್ಟ್ ವೃತ್ತಿ ಜೀವನದ ದ್ವಿತೀಯ ಶತಕವನ್ನು ಜೈಸ್ವಾಲ್ ಪ್ರಥಮ ದ್ವಿಶತಕವಾಗಿ ಮಾರ್ಪಾಡು ಮಾಡಿದರು.

ಜೈಸ್ವಾಲ್ ಮೊದಲ ದಿನದಾಟದ ಅಂತ್ಯಕ್ಕೆ 179 ರನ್ ಗಳಿಸಿ ಅಜೇಯರಾಗಿದ್ದರು. ಇಂದು ಅದೇ ಫಾರ್ಮ್ ಮುಂದುವರಿಸಿದ ಅವರು 277 ಎಸೆತಗಳಲ್ಲಿ ಇನ್ನೂರರ ಗಡಿ ದಾಟಿದರು. ಸಿಕ್ಸರ್ ಮೂಲಕ ಶತಕ ಪೂರೈಸಿದ್ದ ಎಡಗೈ ಬ್ಯಾಟರ್, ಸತತ ಸಿಕ್ಸರ್ ಮತ್ತು ಫೋರ್ ಮೂಲಕ ದ್ವಿಶತಕ ಪೂರೈಸಿದರು.
290 ಎಸೆತಗಳಲ್ಲಿ 209 ರನ್ ಗಳಿಸಿದ್ದ ವೇಳೆ ಜೈಸ್ವಾಲ್ ಅವರು ವೇಗಿ ಜೇಮ್ಸ್ ಆ್ಯಂಡರ್ಸನ್ ಎಸೆತಕ್ಕೆ ಬಲಿಯಾದರು. ಈ ಇನ್ನಿಂಗ್ಸ್ ನಲ್ಲಿ ಅವರು 17 ಬೌಂಡರಿ ಮತ್ತು ಏಳು ಸಿಕ್ಸರ್ ಬಾರಿಸಿದರು. ಈ ವೇಳೆ ಭಾರತ 106.5 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿದೆ.

Latest Indian news

Popular Stories