ಪಾಕ್ ಆಯ್ಕೆ ಸಮಿತಿ ಸೇರಿದ ಕಮ್ರಾನ್ ಅಕ್ಮಲ್, ಇಫ್ರಿಕಾರ್ ಮತ್ತು ಸಲ್ಮಾನ್ ಭಟ್

ಇಸ್ಲಮಾಬಾದ್: ಏಕದಿನ ವಿಶ್ವಕಪ್ ಪ್ರದರ್ಶನದ ಬಳಿಕ ಪಾಕಿಸ್ತಾನ ಕ್ರಿಕೆಟ್ ನಲ್ಲಿ ಹಲವಾರು ಬದಲಾವಣೆಗಳಾಗಿದೆ. ತಂಡದ ನಾಯಕ, ಕೋಚ್ ಬದಲಾವಣೆ ಮಾಡಿದಂತೆ ಆಯ್ಕೆ ಸಮಿತಿಯನ್ನು ಕೂಡಾ ಬದಲು ಮಾಡಲಾಗಿತ್ತು. ವಹಾಬ್ ರಿಯಾಜ್ ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ಇದೀಗ ವಹಾಬ್ ಗೆ ಸಹಾಯಕರನ್ನಾಗಿ ಮೂವರನ್ನು ನೇಮಕ ಮಾಡಲಾಗಿದೆ.

ಮಾಜಿ ಆಟಗಾರರಾದ ಕಮ್ರಾನ್ ಅಕ್ಮಲ್, ರಾವ್ ಇಫ್ತಿಕರ್ ಅಂಜುಂ ಮತ್ತು ಸಲ್ಮಾನ್ ಭಟ್ ಅವರನ್ನು ಮುಖ್ಯ ಆಯ್ಕೆಗಾರ ವಹಾಬ್ ರಿಯಾಜ್‌ ಗೆ ಸಲಹೆಗಾರ ಸದಸ್ಯರನ್ನಾಗಿ ನೇಮಿಸಲಾಗಿದೆ.

ಈ ಮೂವರು ತಕ್ಷಣದಿಂದ ಜಾರಿಗೆ ಬರುವಂತೆ ಆಯ್ಕೆ ಸಮಿತಿಯಲ್ಲಿ ತಮ್ಮ ಪಾತ್ರವನ್ನು ವಹಿಸಿಕೊಳ್ಳಲಿದ್ದಾರೆ. ಸಲಹೆಗಾರ ಸದಸ್ಯರಾಗಿ ಅವರ ಮೊದಲ ಕೆಲಸವು ಪಾಕಿಸ್ತಾನದ ನ್ಯೂಜಿಲ್ಯಾಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯೊಂದಿಗೆ ಪ್ರಾರಂಭವಾಗುತ್ತದೆ. ಅದು ಅವರ ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸದ ಮುಕ್ತಾಯದ ನಂತರ ಜನವರಿ 12 ರಿಂದ ಪ್ರಾರಂಭವಾಗಲಿದೆ.

ಈ ಮೂವರು ಆಯ್ಕೆ ಪ್ರಕ್ರಿಯೆಗಳಲ್ಲ ನೇರವಾಗಿ ಭಾಗಿಯಾಗುವುದಿಲ್ಲ. ಬದಲಾಗಿ ಸ್ಕಿಲ್ ಕ್ಯಾಂಪ್ ಗಳನ್ನು ನಡೆಸುವಂತಹ ಹೆಚ್ಚುವರಿ ಕಾರ್ಯಗಳನ್ನು ಅವರಿಗೆ ನೀಡಬಹುದು ಎಂದು ಪಿಸಿಬಿ ಹೇಳಿದೆ.

Latest Indian news

Popular Stories