ಅರುಣಾಚಲ ಪ್ರದೇಶದಲ್ಲಿ ಭೂಕಂಪ: 3.1 ತೀವ್ರತೆಯಲ್ಲಿ ಕಂಪಿಸಿದ ಭೂಮಿ

ಅರುಣಾಚಲ ಪ್ರದೇಶದಲ್ಲಿ ಇಂದು ಬೆಳಿಗ್ಗೆ (ಮೇ 8) ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಈ ಮಾಹಿತಿಯನ್ನು ಹಂಚಿಕೊಂಡಿದೆ.

ಸುಬನ್ಸಿರಿ (Lower Subansiri) ಜಿಲ್ಲೆಯಲ್ಲಿ ಬೆಳಗ್ಗೆ 4.55 ರ ಸುಮಾರಿಗೆ ಭೂಕಂಪದ ಅನುಭವವಾಗಿದೆ.

ಈ ಸಮಯದಲ್ಲಿ ಎಲ್ಲರೂ ಅವರವರ ಮನೆಗಳಲ್ಲಿ ಮಲಗಿದ್ದರು. ಭೂಮಿಯು ನಡುಗಿದಾಗ ಜನರು ಇದ್ದಕ್ಕಿದ್ದಂತೆ ನಿದ್ದೆಯಿಂದ ಎದ್ದು ಗಾಬರಿಯಿಂದ ಹೊರ ಓಡಿ ಬಂದಿದ್ದಾರೆ. ಕೆಲವರು ಮನೆಯಲ್ಲಿ ಸುರಕ್ಷಿತ ಸ್ಥಳದಲ್ಲಿ ಅವಿತುಕೊಂಡಿದ್ದಾರೆ. ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.

ಈ ಹಿಂದೆ ಮಾರ್ಚ್ 21ರ ಮುಂಜಾನೆ ಅರುಣಾಚಲ ಪ್ರದೇಶದಲ್ಲಿ ಎರಡು ಭೂಕಂಪಗಳು ಸಂಭವಿಸಿದ್ದವು. 3.7 ರ ತೀವ್ರತೆಯೊಂದಿಗೆ ಮೊದಲ ಭೂಕಂಪವು 01:49 ಕ್ಕೆ ಸಂಭವಿಸಿತ್ತು. ಅದೇ ಸಮಯದಲ್ಲಿ ಸರಿಯಾಗಿ ಎರಡು ಗಂಟೆಗಳ ನಂತರ ಬೆಳಿಗ್ಗೆ 03:40 ಕ್ಕೆ, ಎರಡನೇ ಭೂಕಂಪನ ವರದಿಯಾಗಿತ್ತು. ಈ ಭೂಕಂಪದ ತೀವ್ರತೆ 3.4 ಮತ್ತು ಅದರ ಕೇಂದ್ರಬಿಂದು ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್‌ನಲ್ಲಿತ್ತು. ಇದರಿಂದ ಜನ ಬೆಚ್ಚಿಬಿದ್ದಿದ್ದರು. ಇದರಿಂದ ಯಾವುದೇ ಹಾನಿ ಅಥವಾ ಸಾವುನೋವುಗಳ ತಕ್ಷಣದ ವರದಿಯಾಗಿಲ್ಲ.

Latest Indian news

Popular Stories