ಇದೇ 18ರಂದು ಹೈದರಾಬಾದ್‌ಗೆ ಎರಡನೇ ಬಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ

ಹೈದರಾಬಾದ್: ರಾಷ್ಟ್ರಪತಿ ದ್ರೌಪದಿ ಮುರ್ಮು ಹೈದರಾಬಾದ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಡಿ.18ರಂದು ಹೈದರಾಬಾದ್​​​ಗೆ ತೆರಳಲಿರುವ ರಾಷ್ಟ್ರಪತಿಗಳು 5 ದಿನಗಳ ಕಾಲ ತಂಗಲಿದ್ದಾರೆ.ಬೋಲಾರಮ್‌ನಲ್ಲಿರುವ ರಾಷ್ಟ್ರಪತಿ ನಿವಾಸದಲ್ಲಿ ವಾಸ್ತವ್ಯ ಹೂಡುತ್ತಾರೆ.

ಈ ಬಾರಿಯೂ ಮುರ್ಮು ಅವರು ಡಿಸೆಂಬರ್ 23 ರವರೆಗೆ ಹೈದರಾಬಾದ್‌ನ ಅವಳಿ ನಗರವಾದ ಸಿಕಂದರಾಬಾದ್‌ನ ಬೋಲಾರಮ್‌ನಲ್ಲಿರುವ ರಾಷ್ಟ್ರಪತಿ ನಿಲಯಂನಲ್ಲಿ ಅಧಿಕೃತ ನಿವಾಸದಲ್ಲಿ ತಂಗಲಿದ್ದಾರೆ. ಈ ಸಮಯದಲ್ಲಿ ದಕ್ಷಿಣ ರಾಜ್ಯಗಳ ನಾನಾ ಭಾಗಗಳಿಗೆ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಡಿ.23ರಂದು ದೆಹಲಿಗೆ ವಾಪಸಾಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಂತಿ ಕುಮಾರಿ ರಾಷ್ಟ್ರಪತಿ ಭೇಟಿಯ ವ್ಯವಸ್ಥೆ ಪರಿಶೀಲಿಸಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು, ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚಿಸಿದರು. ಅಧಿಕೃತ ಪ್ರಕಟಣೆಯ ಪ್ರಕಾರ, ಪೊಲೀಸ್ ಇಲಾಖೆಗೆ ಸೂಕ್ತ ಭದ್ರತೆ, ಸಂಚಾರ ಮತ್ತು ಬಂದೋಬಸ್ತ್ ವ್ಯವಸ್ಥೆ ಮಾಡಲು ತಿಳಿಸಲಾಗಿದೆ.

Latest Indian news

Popular Stories