ಕೇರಳ: ಆಟೋಗೆ ಅಯ್ಯಪ್ಪ ಭಕ್ತರಿದ್ದ ಬಸ್ ಡಿಕ್ಕಿ, ಒಂದೇ ಕುಟುಂಬದ ಐವರ ಸಾವು

ಕೇರಳ:ಅಯ್ಯಪ್ಪನ ಭಕ್ತರಿಂದ ಬಸ್ ಗೆ ಆಟೋ ಒಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ದುರ್ಘಟನೆ ಕೇರಳದ ಮಲಪುರಂನಲ್ಲಿ ನಡೆದಿದೆ.

ಕೇರಳದ ಮಲಪ್ಪುರಂನಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ರಾಜ್ಯದ ಅಯ್ಯಪ್ಪ ಭಕ್ತರಿದ್ದ ಬಸ್ ಆಟೋ ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನಪ್ಪಿದ್ದಾರೆ.ಆಟೋ ಡ್ರೈವರ್ ಸೇರಿ ನಾಲ್ವರು ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಆಟೋ ಚಾಲಕ ಅಬ್ದುಲ್ ಮಜಿದ್ ಪ್ರಯಾಣಿಕರಾದ ತಸ್ಲಿಂ, ಮುಶಿನ್ ಮಕ್ಕಳಾದ ರಿಹ ಫಾತಿಮಾ, ತನಿಶ್ ಫಾತಿಮಾ ಸಾವನ್ನಪ್ಪಿದ್ದು,ಮಗನಿಗೆ ಗಂಭೀರ ಗಾಯವಾಗಿದೆ. ತಕ್ಷಣ ಆತನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Latest Indian news

Popular Stories