State News

ವೃಕ್ಷೊಥಾನ್ ಹೆರಿಟೇಜ್ ರನ್: ಗಮನ ಸೆಳೆಯುತ್ತಿದ್ದಾರೆ ಹಿರಿಯ ನಾಗರಿಕರು

ವೃಕ್ಷೊಥಾನ್ ಹೆರಿಟೇಜ್ ರನ್: ಗಮನ ಸೆಳೆಯವಿಜಯಪುರ: ವೃಕ್ಷೊಥಾನ್ ಹೆರಿಟೇಜ್ ರನ್- 2023 ಕ್ರೇಜ್ ಹೆಚ್ಚಾಗತೊಡಗಿದ್ದು, ದೇಶದ ಮೂಲೆ ಮೂಲೆಗಳಿಂದ ಈಗಲೂ ಕೂಡ ಹಿರಿಯ ನಾಗರಿಕರು ಪಾಲ್ಗೋಳ್ಳುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಪುಣೆಯ 66 ವರ್ಷದ ಶರದ ಚವ್ಹಾಣ ಈಗ ಮ್ಯಾರಾಥಾನ್ ನಲ್ಲಿ ಹಿರಿಯರ ವಿಭಾಗದಲ್ಲಿ ಅವರದೇ ಆದ ಸಾಧನೆಯ ಮೂಲಕ ಹೆಸರು ಮಾಡಿದ್ದಾರೆ. ಸೇವಾ ನಿವೃತ್ತಿಯ ಬಳಿಕ 60ನೇ ವಯಸ್ಸಿಗೆ ಮ್ಯಾರಾಥಾನ್ ಕುರಿತು ಆಸಕ್ತಿ ಬೆಳೆಸಿಕೊಂಡಿರುವ ಎಂಬುವರು ಈಗ ಈ ಬಾರಿಯ ವೃಕ್ಷೊಥಾನ್ ಹೆರಿಟೇಜ್ ರನ್- 2023ರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

2017ರಲ್ಲಿ ಮಹಾರಾಷ್ಟ್ರದ ಸಾತಾರದಲ್ಲಿ ನಡೆದ ಗುಡ್ಡಗಾಡು ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಗಮನ ಸೆಳೆದ ನಂತರ ಇವರು ಈಗ ಹಲವಾರು ಓಟಗಳಲ್ಲಿ ಪಾಲ್ಗೊಂಡಿದ್ದಾರೆ.ಜಗತ್ತಿನಲ್ಲಿಯೇ ಅತೀ ಹೆಚ್ಚಿನ ಎತ್ತರ ಪ್ರದೇಶಗಳಲ್ಲೊಂದು ಹಾಗೂ ಓಟಗಾರರಿಗೆ ಅತ್ಯಂತ ಕಠಿಣವಾಗಿರುವ ಲಡಾಕ್ ಸೇರಿದಂತೆ ಈವರೆಗೆ ಇವರು 32 ನಾನಾ ಮ್ಯಾರಾಥಾನ್ ಗಳಲ್ಲಿ ಪಾಲ್ಗೋಂಡ ಹಿರಿಯ ಓಟಗಾರ ಎಂದೂ ಹೆಸರು ಮಾಡಿದ್ದಾರೆ.

ಟಾಟಾ ಪ್ರೊಕ್ಯಾಮ್ ಆಯೋಜಿಸುವ ಫುಲ್ ಮ್ಯಾರಾಥಾನ್ ಗಳಲ್ಲಿಯೂ ಪಾಲ್ಗೊಂಡಿರುವ ಅವರು, ಬೆಂಗಳೂರು, ದೆಹಲಿ, ಕೊಲ್ಕೊತಾ ಮತ್ತು ಮುಂಬೈ ಗಳಲ್ಲಿ ನಡೆದ ಮ್ಯಾರಾಥಾನ್ ಗಳಲ್ಲಿ ಭಾಗಿಯಾಗಿದ್ದಾರೆ.

ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದ ಡುಯಾಥ್ಲಾನ್ ನಲ್ಲಿ ಪಾಲ್ಗೋಂಡಿರುವ ಅವರು, ಈ ಕ್ರೀಡೆಯ ಭಾಗವಾಗಿ 10 ಕಿ. ಮೀ. ಓಟ, 40 ಕಿ. ಮೀ. ಸೈಕ್ಲಿಂಗ್ ಮತ್ತು 5 ಕಿ. ಮೀ. ಓಟ ಓಡುವ ಮೂಲಕ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ, ಇದೇ ಡಿಸೆಂಬರ್ 3 ರಂದು ಪುಣೆ- ಲೋನಾವಾಲಾ ನಲ್ಲಿ ಐಎಸ್ ಆಯೋಜಿಸಿದ್ದ ಅಥ್ಲೆಟಿಕ್ಸ್ ನಲ್ಲಿ 100 ಕಿ. ಮೀ. ಸೈಕ್ಲಿಂಗ್ ಪೂರ್ಣಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸೀರೆಯುಟ್ಟು ಬರಿಗಾಲಿನಲ್ಲಿ ಓಡುವ ಪ್ರೀತಿ ಮನೀಶ್*
ಸೀರೆಯುಟ್ಟು ಬರಿಗಾಲಿನಲ್ಲಿ ಓಡುವ ಓಟಗಾರ್ತಿ ಎಂದೇ ಹೆಸರಾಗಿರುವ ಪ್ರೀತಿ ಮನೀಶ್ 21 ಕಿ. ಮೀ. ಸ್ಪರ್ಧೆಯಲ್ಲಿ ಪಾಲ್ಗೋಳ್ಳುತ್ತಿರುವುದು ಇತರರಿಗೆ ಸ್ಪೂರ್ತಿ ನೀಡುತ್ತಿದೆ.

ಹುಬ್ಬಳ್ಳಿ ಮೂಲದ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಅವರು, ಭಾರತೀಯರು ಸೀರೆ ಉಡುವುದನ್ನು ಪ್ರೋತ್ಸಾಹಿಸಲು ಮತ್ತು ಬರಿಗಾಲಿನಲ್ಲಿಯೂ ಸಾಧನೆ ಮಾಡಬಹುದು ಎಂಬುದನ್ನು ತೋರಿಸಲು ಅವರು ಅಪ್ಪಟ ಭಾರತೀಯ ಮಹಿಳೆಯಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡುವುದನ್ನು ರೂಢಿಯಾಗಿಸಿಕೊಂಡಿದ್ದಾರೆ. ಅಲ್ಲದೇ, ಈಗಾಗಲೇ ಹಲವಾರು ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡು ಬರಿಗಾಲ ಓಟಗಾರ್ತಿ ಎಂದೇ ಹೆಸರು ಮಾಡಿದ್ದಾರೆ.

ದೂರದ ಓಟಗಳಲ್ಲಿ ಏಕಾಂಗಿಯಾಗಿ ಓಡುವುದನ್ನು ಹೆಚ್ಚಾಗಿ ಇಷ್ಟಪಡುವ ಅವರು, ಓಟ ಮತ್ತು ವ್ಯಾಯಾಮದ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವ ಸಂಕಲ್ಪ ಮಾಡಿದ್ದಾರೆ. ಶಿಸ್ತುಬದ್ಧ ಜೀವನಕ್ಕೆ ಇತತರಿಗೆ ಮಾದರಿಯಾಗಿರುವ ಅವರು, ಪ್ರತಿದಿನ ನಸುಕಿನ ಜಾವ 3.30 ಗಂಟೆಗೆ ಏಳುತ್ತಾರೆ.

ವಾರದಲ್ಲಿ ಐದು ದಿನಗಳನ್ನು ಓಟ ಮತ್ತು ವ್ಯಾಯಾಮಗಳಿಗಾಗಿ ಮೀಸಲಿಟ್ಟಿದ್ದಾರೆ. 10 ವರ್ಷದ ಮಗುವಿನ ತಾಯಿಯಾಗಿರುವ ಪ್ರೀತಿ ಮನೀಶ ಅವರು ತಾಯಿ, ಹೆಂಡತಿ, ಸೊಸೆ ಮತ್ತು ಮಗಳ ರೂಪದಲ್ಲಿ ಎಲ್ಲ ಸಂಬಂಧಗಳನ್ನು ವೃತ್ತಿಪರವಾಗಿ ನಿಭಾಯಿಸುವ ದಿಟ್ಟ ಮಹಿಳೆಯಾಗಿದ್ದಾರೆ. ಈಗ ಇವರು ವಿಜಯಪುರದಲ್ಲಿ ಡಿಸೆಂಬರ್ 24 ರಂದು ರವಿವಾರ ನಡೆಯಲಿರುವ ಮ್ಯಾರಾಥಾನ್ ನಲ್ಲಿ ಪಾಲ್ಗೋಳ್ಳುತ್ತಿದ್ದು, ಯುವಕರಿಗೂ ಸ್ಪೂರ್ತಿ ನೀಡಲಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button