State News

ಮೋದಿ ಐದು ಸಾವಿರ ಕೋಡ್ತಾರಂತೆ: ಹುಬ್ಬಳ್ಳಿಯಲ್ಲಿ ಎದ್ದುಬಿದ್ದು ಓಡಿದ ಮಹಿಳೆಯರ ದಂಡು

ಹುಬ್ಬಳ್ಳಿ,: ಪ್ರಧಾನಿ ನರೇಂದ್ರ ಮೋದಿ ಐದು ಸಾವಿರ ಕೋಡ್ತಾರಂತೆ ಅಂತೆ ಸುಳ್ಳು ವದಂತಿ ಹಬ್ಬಿದ್ದು ಹುಬ್ಬಳ್ಳಿ ಸಮೀಪದ ಕಲಘಟಗಿಯ ಗ್ಯಾಸ್ ಕಚೇರಿವೊಂದರ ಮುಂದೆ ಎದ್ದುಬಿದ್ದು ಎಂದು ಮಹಿಳೆಯರ ದಂಡು ಸೇರಿದೆ.

ಅದರಂತೆ ಎಲ್ಲರ ಇ ಕೆವೈಸಿ ಪಡೆದುಕೊಳ್ಳಿ ಎಂದು ಗ್ಯಾಸ್‌ ಸಿಲಿಂಡರ್‌ ವಿತರಕ ಕಂಪನಿಯ ಅಧಿಕಾರಿಗಳು ಕಳೆದ ಒಂದೆರಡು ವಾರದ ಹಿಂದೆ ತಮ್ಮ ವಿತರಕರಿಗೆ ಸೂಚನೆ ನೀಡಿದ್ದಾರೆ. ಹುಬ್ಬಳ್ಳಿ ಧಾರವಾಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮೀಣ ಭಾಗದಲ್ಲಿ ಮೋದಿಯವರು ಐದು ಸಾವಿರ ನೀಡುತ್ತಿದ್ದಾರೆ ಎಂದು ಸುಳ್ಳು ವದಂತಿ ಹಬ್ಬಿಸಿದ್ದು ಇಂದು ಕಲಘಟಗಿ ಪಟ್ಟಣದ ಲೋಕಪೂಜ್ಯ ಗ್ಯಾಸ್ ಕಚೇರಿ ಮುಂದೆ ನೂರಾರು ಮಹಿಳೆಯರು ಮುಂಜಾನೆಯಿಂದಲೇ ಸರದಿಯಲ್ಲಿ ನಿಂತಿದ್ದಾರೆ.

ನಿನ್ನೆಯವರಗೂ(ಶುಕ್ರವಾರದವರೆಗೂ) ಇ ಕೆವೈಸಿಗೆ ಅಲ್ಪ ಪ್ರಮಾಣದ ಜನರು ಆಗಮಿಸುತ್ತಿದ್ದರು ಇಂದು ಏಕಾಏಕಿ ಗ್ರಾಮೀಣ ಭಾಗದಿಂದ ನೂರಾರು ಜನರು ಆಗಮಿಸಿದ್ದು, ಈ ಕೆವೈಸಿ ಮಾಡಲು ತೊಂದರೆ ಆಗುತ್ತಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಈ ವೇಳೆ ಮಹಿಳೆಯರು ಯಾಕಿಷ್ಟು ಪ್ರಮಾಣದಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದು ಕೇಳಿದಾಗ ಪ್ರಧಾನಿ ನರೇಂದ್ರ ಮೋದಿಯವರು ಐದು ಸಾವಿರ ಹಣ ನೀಡುತ್ತಿದ್ದಾರೆ ಎನ್ನುವ ಸುಳ್ಳು ವದಂತಿಗೆ ಮಹಿಳೆಯರು ಆಗಮಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button