State News

ತಿರುಪತಿಯಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ: ಭಕ್ತರಲ್ಲಿ ಹೆಚ್ಚಿದ ಭೀತಿ!

ತಿರುಪತಿ: ತಿರುಪತಿಯಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ತಿಮ್ಮಪ್ಪನ ಭಕ್ತರಲ್ಲಿ ಆತಂಕ ಹೆಚ್ಚಿಸಿದೆ. ಅಲಿಪಿರಿ ಮೆಟ್ಟಿಲುಗಳ ಮೂಲಕ ಕಾಲ್ನಡಿಗೆಯಲ್ಲಿ ತಿರುಮಲಕ್ಕೆ ತೆರಳಿದ ಭಕ್ತರಿಗೆ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಚಿರತೆಯ ದರ್ಶನವಾಗಿದೆ.

ತಿರುಮಲದ ಶೇಷಾಚಲಂ ಅರಣ್ಯದಲ್ಲಿ ಚಿರತೆ ಹಾಗೂ ಇತರೆ ಕಾಡುಪ್ರಾಣಿಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಈ ವರ್ಷದ ಆಗಸ್ಟ್‌ನಲ್ಲಿ ಚಿರತೆಗಳ ಓಡಾಟ ಶ್ರೀವಾರಿಯ ಭಕ್ತರಲ್ಲಿ ಭಯ ಹುಟ್ಟಿಸಿತ್ತು. 48 ಗಂಟೆಗಳಲ್ಲಿ ಅಲಿಪಿರಿ ಸುತ್ತಮುತ್ತ ಚಿರತೆಗಳು ಕಾಣಿಸಿಕೊಂಡಿವೆ. ಟಿಟಿಡಿ ಅರಣ್ಯ ಇಲಾಖೆ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾ ಮೂಲಕ ಅದರ ಚಲನವಲನವನ್ನು ಪತ್ತೆ ಮಾಡಿದ್ದಾರೆ.

ಅಲಿಪಿರಿಯಿಂದ ಗಾಳಿಗೋಪುರ, ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಹಾಗೂ 38ನೇ ತಿರುವು ಪ್ರದೇಶದಲ್ಲಿ ಐದು ಕಡೆ ಚಿರತೆ ಸಂಚಾರ ಪತ್ತೆಯಾಗಿದೆ. ಇದರ ಚಲನವಲನ ಪತ್ತೆ ಹಚ್ಚಲು ಅಲಿಪಿರಿ ಮಾರ್ಗವಾಗಿ ಗಾಳಿಗೋಪುರದಿಂದ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದವರೆಗೆ ಸುಮಾರು 500 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಸಿಸಿಟಿವಿ ಕ್ಯಾಮರಾದಲ್ಲಿ ಚಿರತೆ ಪತ್ತೆಯಾಗಿದೆ.

ಅಲಿಪಿರಿ ಮೆಟ್ಟಿಲುಗಳ ಮೇಲೆ ತಿರುಮಲಕ್ಕೆ ತೆರಳುತ್ತಿದ್ದ ನೆಲ್ಲೂರು ಜಿಲ್ಲೆಯ ಕೊವ್ವೂರು ಮೂಲದ ಆರು ವರ್ಷದ ಬಾಲಕಿ ಲಕ್ಷಿತಾ ಮೇಲೆ ಚಿರತೆಯೊಂದು ದಾಳಿ ನಡೆಸಿ ಕೊಂದಿರುವ ಘಟನೆ ಬಳಿಕ ಟಿಟಿಡಿ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಚಿರತೆಗಳ ವಲಸೆಯ ಮೇಲೆ ಕೇಂದ್ರೀಕರಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಮೂಲಕ ಅವರ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ.

ಚಿರತೆಗಳ ಓಡಾಟ ಹೆಚ್ಚಾಗಿರುವುದರಿಂದ ಕಾಲ್ನಡಿಗೆಯಲ್ಲಿ ತೆರಳುವ ಭಕ್ತರಿಗೆ ತಕ್ಷಣದ ರಕ್ಷಣಾ ಕ್ರಮವಾಗಿ ಟಿಟಿಡಿ ಅಧಿಕಾರಿಗಳು ಊರುಗೋಲನ್ನು ಒದಗಿಸಿದ್ದಾರೆ.ಹೀಗಿರುವಾಗ ಅಲಿಪಿರಿ ಮೆಟ್ಟಿಲುಗಳ ಮೇಲೆ ಮತ್ತೊಮ್ಮೆ ಚಿರತೆಗಳ ಚಲನೆಯು ಸಂಚಲನವನ್ನು ಸೃಷ್ಟಿಸಿತು. ಈ ಬಗ್ಗೆ ಟಿಟಿಡಿಗೆ ಮಾಹಿತಿ ನೀಡಲಾಗಿದೆ. ಟಿಟಿಡಿ ಸಿಬ್ಬಂದಿ ಸಿಸಿ ಕ್ಯಾಮರಾಗಳ ಮೂಲಕ ಈ ಚಿರತೆಯ ಚಲನವಲನದ ಮೇಲೆ ಗಮನಹರಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button