ಚೆನ್ನೈ : ಕೋವಿಡ್ ಪಾಸಿಟಿವ್ ಬಂದ ನಂತರ ವೆಂಟಿಲೇಟರ್ನಲ್ಲಿದ್ದ ನಟ ವಿಜಯಕಾಂತ್ (71) ನಿಧನರಾಗಿದ್ದಾರೆ.
ಡಿಎಂಡಿಕೆ ಮುಖ್ಯಸ್ಥ ವಿಜಯಕಾಂತ್ ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಜ್ವರ, ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅವರನ್ನು ನವೆಂಬರ್ 18 ರಂದು ರಾಮಪುರಂನ ಮಿಯಾಟ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.