ಮೋದಿಗೆ ಚೊಂಬು ಪ್ರದರ್ಶಿಸಲು ಬಂದ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ವಶಕ್ಕೆ


ಬೆಂಗಳೂರು: ಬೆಂಗಳೂರು ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಚೊಂಬು ಪ್ರದರ್ಶಿಸಲು ಸಿದ್ದರಾದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ಮೋದಿ ಆಗಮಿಸಲಿದ್ದು, ಅವರು ಬರಲಿದ್ದ ರಸ್ತೆಯಲ್ಲಿ ಕಾದು ನಿಂತ ಯುವ ಕಾಂಗ್ರೆಸ್ ಕಾರ್ಯಕರ್ತರು ಚೊಂಬು ಪ್ರದರ್ಶಿಸಲು ಮುಂದಾಗಿದ್ದಾರೆ.


ನಗರದ ಮೇಕ್ರಿ ವೃತ್ತದ ಬಳಿ ಚೊಂಬಿನೊಂದಿಗೆ ರಸ್ತೆಗೆ ಇಳಿದ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ಮತ್ತು ಸಂಗಡಿಗರನ್ನು ಕೂಡಲೇ ಪೊಲೀಸರು ತಡೆದು, ವಶಕ್ಕೆ ಪಡೆದುಕೊಂಡಿದ್ದಾರೆ.

Latest Indian news

Popular Stories