ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ – ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದು, ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ ಈ ಬಗ್ಗೆ ಆದೇಶ ಹೊರಬಿದ್ದಿದ್ದು, ಲಕ್ಷ್ಮಣ ನಿಂಬರಗಿ ಸೇರಿ ಹಲವರ ಟ್ರಾನ್ಸಫರ್ ಮಾಡಲಾಗಿದೆ.

ಮಂಗಳೂರು ನಗರ ಕಮಿಷನರ್ ಕುಲದೀಪ್ ಜೈನ್ ಅವರನ್ನು ವರ್ಗಾಯಿಸಿ ಅವರ ಜಾಗಕ್ಕೆ ಅನುಪಮ್ ಅಗರ್ವಾಲ್ ಅವರನ್ನು ನೇಮಿಸಲಾಗಿದೆ. ಇದೇ ವೇಳೆ ಉಡುಪಿ ಎಸ್ ಪಿ ಅಕ್ಷಯ್ ಹಾಕೇ ಮಚ್ಚಿಂದ್ರ ಅವರ ಬದಲಿಗೆ ಡಾ ಅರುಣ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

ಬೆಂಗಳೂರು ನಗರ ಅಪರಾಧ ವಿಭಾಗದ ಡಿಐಜಿ ಡಾ ಶರಣಪ್ಪ ಅವರನ್ನು ಮೈಸೂರು ಪೊಲೀಸ್ ಅಕಾಡೆಮಿ ಡಿಐಜಿ ಆಗಿ ವರ್ಗಾಯಿಸಲಾಗಿದೆ.

ರಾಜ್ಯ ಕ್ರೈಮ್ ರೆಕಾರ್ಡ್ ಬ್ಯೂರೊ ಎಸ್ ಪಿ ವರ್ತಿಕಾ ಕಟಿಯಾರ್ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗದ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ರಾಮನಗರ ಎಸ್ ಪಿ ಕಾರ್ತಿಕ್ ರೆಡ್ಡಿ ಅವರನ್ನು ಬೆಂಗಳೂರು ಸಂಚಾರ ದಕ್ಷಿಣ ವಿಭಾಗದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಗುಪ್ತಚರ ಎಸ್ ಪಿ ಸೋನಾವನೆ ರಿಷಿಕೇಶ್ ಭಗವಾನ್ ಅವರನ್ನು ವಿಜಯಪುರ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಪೊಲೀಸ್ ಅಕಾಡೆಮಿ ಮೈಸೂರು ನಿರ್ದೇಶಕ ಲೋಕೆಶ್ ಭರಮಪ್ಪ ಅವರನ್ನು ಅದೇ ಸಂಸ್ಥೆಯ ಎಸ್ ಪಿ ಮತ್ತು ಉಪ ನಿರ್ದೇಶಕರಾಗಿ ನಿಯೋಜಿಸಲಾಗಿದೆ.

ಬೆಂಗಳೂರು ಕೇಂದ್ರ ವಲಯ ಡಿಸಿಪಿ ಶ್ರೀನಿವಾಸ ಗೌಡ ಅವರನ್ನು ಬೆಂಗಳೂರು ನಗರ ಅಪರಾಧ ವಿಭಾಗ-2 ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ಬೆಂಗಳೂರು ದಕ್ಷಿಣ ವಲಯ ಡಿಸಿಪಿ ಕೃಷ್ಣಕಾಂತ್ ಅವರನ್ನು ಆಡಳಿತ ವಿಭಾಗದ ಸಹಾಯಕ ಪೊಲೀಸ್ ಮಹಾನಿರೀಕ್ಷಕರಾಗಿ ನೇಮಿಸಲಾಗಿದೆ.

ಕಲಬುರಗಿ ಗುಪ್ತಚರ ವಿಭಾಗದ ಎಸ್ ಪಿ ಅಮರನಾಥ್ ರೆಡ್ಡಿ ಅವರನ್ನು ಬಾಗಲಕೋಟೆ ಎಸ್ ಪಿಯಾಗಿ ನೇಮಿಸಲಾಗಿದೆ.

ಹಾಸನ್ ಎಸ್ ಪಿ ಹರಿರಾಂ ಶಂಕರ್ ಅವರನ್ನು ಗುಪ್ತಚರ ಎಸ್ ಪಿಯಾಗಿ ವರ್ಗಾಯಿಸಲಾಗಿದೆ

ಕಲಬುರಗಿ ಕಾನೂನು ಸುವ್ಯವಸ್ಥೆ ಡಿಸಿಪಿ ಅಡ್ಡೂರು ಶ್ರೀನಿವಾಸುಲು ಅವರನ್ನು ಕಲಬುರಗಿ ಎಸ್ ಪಿಯಾಗಿ ನೇಮಿಸಲಾಗಿದೆ.

ಅಂಶು ಕುಮಾರ್ ಅವರನ್ನು ಉಡುಪಿ ಕರಾವಳಿ ರಕ್ಷಣಾ ಪಡೆ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

ಕನಿಕಾ ಸಿಕ್ರಿವಾಲ್ ಅವರನ್ನು ಕಲಬುರಗಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ನೇಮಿಸಲಾಗಿದೆ.

ಕೌಶಲ್ ಚೌಸ್ಕೆ ಅವರನ್ನು ಬೆಂಗಳೂರು ವಿಧಿವಿಜ್ಞಾನ ವಿಭಾಗದ ಜಂಟಿ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ

ಬೆಂಗಳೂರು ನಗರ ಕಮಾಂಡ್ ಸೆಂಟರ್ ಡಿಸಿಪಿ ರವೀಂದ್ರ ಕಾಶಿನಾಥ್ ಗಡಾಡಿ ಅವರನ್ನು ಗುಪ್ತಚರ ಎಸ್ ಪಿಯಾಗಿ ವರ್ಗಾಯಿಸಲಾಗಿದೆ.

Latest Indian news

Popular Stories