ಬೈಂದೂರು: ಮಲಗಿದ್ದಲ್ಲೇ ಯುವಕನ ಮೃತ್ಯು – ಯುವಜನರಲ್ಲಿ ಹೆಚ್ಚುತ್ತಿದೆ ಹೃದಯಾಘಾತ!

ಬೈಂದೂರು: ಊಟ ಮಾಡಿ ಮನೆಯಲ್ಲಿ ಮಲಗಿದ್ದಾಗ ದೇಹದಲ್ಲಿ ಆಯಾಸಗೊಂಡು ಯುವಕನೊಬ್ಬ ಹಠಾತ್‌ ಮೃತಪಟ್ಟ ಘಟನೆ ಬೈಂದೂರು ಸಮೀಪದ ಮದ್ದೋಡಿ ರಸ್ತೆಯ ದರ್ಖಾಸ್‌ ಕಾಲನಿಯಲ್ಲಿ ನಡೆದಿದೆ.

ಈತ ಕೂಲಿ ಕೆಲಸ ಮಾಡಿಕೊಂಡಿದ್ದು ಆರೋಗ್ಯವಂತನಾಗಿದ್ದ.ರಾತ್ರಿ ಊಟ ಮಾಡಿ ಮಲಗಿದ್ದಾಗ ಮೈಯೆಲ್ಲಾ ಬೆವತು ಮನೆಯವರನ್ನು ಕೂಗಿ ಕರೆದಿದ್ದ. ಮನೆಯವರು ತತ್‌ಕ್ಷಣ ಆಸ್ಪತ್ರೆಗೆ ಸಾಗಿಸಿದರೂ, ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚೆಗೆ ಪುಂಜಾಲಕಟ್ಟೆಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಯುವತಿಯೋರ್ವಳು ಊಟ ಮಾಡಿ ಮಲಗಿದಲ್ಲಿಯೇ ಅಸ್ವಸ್ಥಗೊಂಡು ಸಾವಿಗೀಡಾಗಿದ್ದರು. ಹೃದಯಾಘಾತದಿಂದ ಸಾವು ಸಮಭವಿಸಿತ್ತೆಂದು ಅನಂತರ ಪರೀಕ್ಷಿಸಿದ ವೈದ್ಯರು ತಿಳಿಸಿದ್ದರು.

Latest Indian news

Popular Stories