ವಿ. ಸೋಮಣ್ಣ, ಅರವಿಂದ ಲಿಂಬಾವಳಿ ಕಾಂಗ್ರೆಸ್‌ ಸೇರ್ಪಡೆ ಸಾಧ್ಯತೆ : ಜಿ ಪರಮೇಶ್ವರ್‌

ತುಮಕೂರು, ನವೆಂಬರ್‌ 24: ಸೂಕ್ತ ಸ್ಥಾನಮಾನ ಸಿಗದೆ ಬಿಜೆಪಿಯಿಂದ ದಿನೇ ದಿನೆ ದೂರವಾಗುತ್ತಿರುವ ಮಾಜಿ ಸಚಿವ ವಿ ಸೋಮಣ್ಣ ಹಾಗೂ ಅರವಿಂದ ಲಿಂಬಾವಳಿ ಅವರು ಕಾಂಗ್ರೆಸ್‌ ಸೇರುತ್ತಾರೆ ಎಂಬ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್‌ ಅವರು ಸುಳಿವು ನೀಡಿದ್ದಾರೆ.

ಬಿಜೆಪಿಯ ನಾಯಕರು ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ಊಹಾಪೋಹಗಳ ನಡುವೆ ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ಅತೃಪ್ತ ಬಿಜೆಪಿ ನಾಯಕರಾದ ವಿ ಸೋಮಣ್ಣ ಮತ್ತು ಅರವಿಂದ ಲಿಂಬಾವಳಿ ಅವರು ಹಳೆಯ ಪಕ್ಷದ ಕಡೆಗೆ ಹೆಚ್ಚು ಹತ್ತಿರವಾಗುತ್ತಿದ್ದಾರೆ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಟಿಕೆಟ್‌ ಸಿಗುವ ಯಾವುದೇ ಭರವಸೆ ಕಾಣದ ಹಿನ್ನೆಲೆಯಲ್ಲಿ ಡಿಸೆಂಬರ್‌ 6ರವರೆಗೆ ಕಾದುನೋಡುವ ನಿರ್ಧಾರಕ್ಕೆ ಸೋಮಣ್ಣ ಬಂದಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಅವರು ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಅವರಿಗೆ ಟಿಕೆಟ್‌ ನೀಡಲಾಗಿತ್ತು, ಅದರಂತೆ ಅವರು ಅಲ್ಲಿ ಸೋತರು. ಬಳಿಕ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಪರದಾಡುವಂತಾಗಿದೆ.

ಬಿಎಸ್‌ ಯಡಿಯೂರಪ್ಪ ಅವರ ಮಗನಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದಂತೆ ತಾಮಗಾದರೂ ಪರವಾಗಿಲ್ಲ ತಮ್ಮ ಮಗನಿಗಾದರೂ ಪಕ್ಷ ಸ್ಥಾನಮಾನ ನೀಡಿದರೆ ಅವರು ಸುಮ್ಮನಾಗುತ್ತಿದ್ದರೂ ಆದರೆ ಹೈಕಮಾಂಡ್‌ ಅವರನ್ನು ಗೌರವಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಅವರು ಬಿಜೆಪಿ ಬಿಡುವ ಹಂತದಲ್ಲಿ ಇದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ ಜೊತೆಗೆ ಮಾತುಕತೆ ನಡೆಸಿರುವ ಸೋಮಣ್ಣ ಅವರು ಡಿಸೆಂಬರ್‌ 15 ರ ನಂತರ ಅಂದ್ರೆ ಬೆಳಗಾವಿಯನ್ನ ನಡೆಯುವ ಚಳಿಗಾಲದ ಅಧಿವೇಶನದ ಬಳಿಕ ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Latest Indian news

Popular Stories