ತುಮಕೂರು : ಕೆರೆಯೊಂದರಲ್ಲಿ ಅಸ್ಥಿಪಂಜರ ಪತ್ತೆ,

ತುಮಕೂರು: ತುಮಕೂರಿನಲ್ಲಿ ಕುಣಿಗಲ್ ನಲ್ಲಿಯೂ ಅಸ್ಥಿಪಂಜರ ಪತ್ತೆ.

ಕುಣಿಗಲ್ ನ ಕಿತ್ತಾನಮಂಗಲ ಕೆರೆಯಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದ್ದು, ಅಸ್ಥಿಪಂಜರದ ಜೊತೆಗೆ ಬೆಳ್ಳಿ ಕಾಲ್ಗೆಜ್ಜೆ, ಕೈ ಬಳೆಗಳು, ನೈಟಿ ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಇದು ಮಹಿಳೆಯೊಬ್ಬರ ಅಸ್ಥಿಪಂಜರ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 6 ತಿಂಗಳ ಹಿಂದೆ ಕಲ್ಲಿಪಾಳ್ಯ ಗ್ರಾಮದ ರಂಜಿತಾ ಎಂಬ ಮಹಿಳೆ ನಾಪತ್ತೆಯಾಗಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ಈವರೆಗೂ ಅವರ ಸುಳಿವು ಇರಲಿಲ್ಲ. ಈಗ ಕೆರೆಯಲ್ಲಿ ಪತ್ತೆಯಾಗಿರುವ ಅಸ್ಥಿಪಂಜರ ಅವರದ್ದೇ ಇರಬಹುದು ಎನ್ನಲಾಗಿದೆ.

Latest Indian news

Popular Stories