Tumkur

ಬೆಸ್ಕಾಂ ನಿರ್ಲಕ್ಷ್ಯ ಹತ್ತಾರು ಮನೆಗಳ ಎಲೆಕ್ಟ್ರಾನಿಕ್ಸ್ ವಸ್ತುಗಳು ಭಸ್ಮ

ತುರುವೇಕೆರೆ: ಪಟ್ಟಣದ ಎಪಿಎಂಸಿ ಹಿಂಭಾಗದಲ್ಲಿರುವ ಮುತ್ತುರಾಯನಗರದ ವಿದ್ಯುತ್ ಪರಿವರ್ತಕದಲ್ಲಿ ಯಾವಾಗ್ಲೂ ವ್ಯತ್ಯಯ ಆಗುತ್ತಿರುವ ಹಿನ್ನಲೆ ಹತ್ತಾರು ಮನೆಗಳ ಇಲೆಕ್ಟ್ರಾನಿಕ್ ಸಮಾನ್ ಗಳು ಹಾಳಾಗಿರೋದು ಬೆಳಕಿಗೆ ಬಂದಿದೆ.

ಈ ಕುರಿತು ಬೇಸರ ವ್ಯಕ್ತಪಡಿಸಿರುವ ಬಡಾವಣೆಯ ಜಯಂತ್, ಕೃಷ್ಣಮೂರ್ತಿ ಮತ್ತು ಸುಕನ್ಯ ರವರು ಕಳೆದ ಹತ್ತಿಪ್ಪತ್ತು ದಿನಗಳಿಂದ ನಮ್ಮ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕದಲ್ಲಿ ಪದೇ ಪದೇ ವ್ಯತ್ಯಯವಾಗುತ್ತಿದೆ.ಈ ಕುರಿತು ಸಾಕಷ್ಟು ಬಾರಿ ಬೆಸ್ಕಾಂಗೆ ದೂರು ಸಲ್ಲಿಸಿದರೂ ಸಹ ಪ್ರಯೋಜನವಾಗಿಲ್ಲ.

ಮೂರು ಬಾರಿಗೂ ಹೆಚ್ಚು ವಿದ್ಯುತ್ ಪ್ರವಹಿಸಿ ಸಾಕಷ್ಟು ಮನೆಗಳ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ. ಟಿವಿ, ಫ್ರಿಡ್ಜ್, ಬಲ್ಪ್, ವಾಟರ್ ಪಂಪ್ ಗಳು ಸೇರಿದಂತೆ ಹಲವಾರು ವಸ್ತುಗಳು ಹಾಳಾಗಿವೆ. ವಿನಾಕಾರಣ ಗ್ರಾಹಕರಿಗೆ ನಷ್ಟ ಉಂಟಾಗುತ್ತಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸದಿದ್ದಲ್ಲಿ ಬೆಸ್ಕಾಂ ಕಚೇರಿಯ ಮುಂದೆ ಮುತ್ತುರಾಯಸ್ವಾಮಿ ಬಡಾವಣೆಯ ನಾಗರಿಕರು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಜಯಂತ್, ಕೃಷ್ಣಮೂರ್ತಿ ಮತ್ತು ಸುಕನ್ಯ ಎಚ್ಚರಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button