ತುಮಕೂರು :ಭೀಕರ ಅಪಘಾತ, ಲಾರಿಗೆ ಬೈಕ್ ಡಿಕ್ಕಿ :ಬೈಕ್ ಸವಾರನ ತಲೆ ಛಿದ್ರ

ತುಮಕೂರು : ತುಮಕೂರಿನಲ್ಲಿ ಲಾರಿ ಬೈಕ್ ಗೆ ಡಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರನ ತಲೆ ಛಿದ್ರ ವಾಗಿದೆ.

ತುಮಕೂರು ನಗರದ ಶಿರಾ ಗೇಟ್ ನ ಎಸ್ ಮಾಲ್ ಬಳಿ ಈ ಘಟನೆ ಸಂಭವಿಸಿದ್ದು,ಮೃತರನ್ನು ಶಾಂತಿನಗರ ನಿವಾಸಿ ರಾಜಣ್ಣ (64) ಎಂದು ಗುರುತಿಸಲಾಗಿದೆ.ಮಾರ್ಕೆಟ್ ನಿಂದ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಸ್ಕೂಟರ್ ಗೆ ಲಾರಿ ಡಿಕ್ಕಿ ಹೊಡೆದಿದೆ.

ಕೆಳಗೆ ಬಿದ್ದ ಪರಿಣಾಮ ರಾಜಣ್ಣ ತಲೆ ಸಂಪೂರ್ಣ ಛಿದ್ರವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Latest Indian news

Popular Stories