ಯುವ ಉದ್ಯಮಿ, ಕಾನೂನು ಪದವೀಧರ ಕಾರ್ತಿಕ್ ಪೈ ಆತ್ಮಹತ್ಯೆ

ಉಡುಪಿ; ಡ್ರೈ ಫ್ರೂಟ್ ಮಾರಾಟ ಮಳಿಗೆಯ ಮಾಲಕರ ಮಗ ಇಂದು ಬೆಳಿಗ್ಗೆ ಅಂಬಲಪಾಡಿಯ ಮಜ್ಜಿಗೆ ಪಾದೆಯಲ್ಲಿರು ತಮ್ಮ ವಸತಿ ಸಮುಚ್ಚಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ.

ಕಾರ್ತಿಕ್ ಪೈ (37) ಆತ್ಮಹತ್ಯೆ ಮಾಡಿಕೊಂಡವರು. ಯುವ ಉದ್ಯಮಿ ಮತ್ತು ಕಾನೂನು ಪದವೀಧರಾಗಿದ್ದ ಇವರು ಯಾವುದೋ ವಿಚಾರದಲ್ಲಿ ಮನನೊಂದು ಇಂದು ಬೆಳಿಗ್ಗೆ ತಮ್ಮ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories