ಉಡುಪಿ ನಗರದ ಚಿನ್ನಾಭರಣ ತಯಾರಕ ಘಟಕದಿಂದ ರಾಸಾಯನಿಕ ಹೊಗೆ: ಸ್ಥಳೀಯರಲ್ಲಿ ಆತಂಕ

ಉಡುಪಿ: ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಚಿನ್ನ ತಯಾರಿಕಾ ಘಟಕವೊಂದು ಹೊರಸೂಸುವ ಹೊಗೆಯು ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ.

IMG 20230724 WA0110 Udupi

ನಗರದ ಹಳೆಯ ಕಾರ್ಪೊರೇಷನ್ ಬ್ಯಾಂಕ್(ಈಗಿನ ಯೂನಿಯನ್ ಬ್ಯಾಂಕ್) ರಸ್ತೆಯಲ್ಲಿರುವ ಈ ಘಟಕದ ಸುತ್ತಮುತ್ತ ಅಂಗಡಿ ಮುಗ್ಗಟ್ಟು ದೇವಾಲಯ ಮಸೀದಿ, ಸರಕಾರಿ ಶಾಲೆ, ವಸತಿ ಸಮುಚ್ಛಗಳಿದ್ದು ಪರಿಸರದಲ್ಲಿ ದಟ್ಟವಾಗಿ ಆವರಿಸಿದೆ.

ಈ ರಾಸಾಯನಿಕಯುಕ್ತ ಈ ಹೊಗೆಯಿಂದ ಮೂಗು ಕಣ್ಣು ಉರಿ, ಕೆಮ್ಮು ಕಾಣಿಸುತ್ತಿದೆ. ಪಾದಾಚಾರಿಗಳು ಕೂಡ ಮೂಗು ಮುಚ್ಚಿ ನಡೆಯುವ ಪರಿಸ್ಥಿತಿ ಎದುರಾಗಿದೆ

ಇದೇ ರೀತಿಯ ಚಿನ್ನಾಭರಣದ ಘಟಕವೊಂದು ಕೇರಳದ ವಸತಿ ಪ್ರದೇಶದಲ್ಲಿದ್ದ ಕಾರಣಕ್ಕಾಗಿ ಅಲ್ಲಿನ ಸ್ಥಳಿಯ ಆಡಳಿತ ಅದರ ಅನುಮತಿಯನ್ನು ರದ್ದುಗೊಳಿಸಿತ್ತು. ಇದೀಗ ಈ ರೀತಿ ರಾಸಾಯನಯುಕ್ತ ಹೊಗೆನು ಹೊರಸುಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಭೀತಿ ಎದುರಾಗಿದೆ

ಆದುದರಿಂದ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ರು ಒತ್ತಾಯಿಸಿದ್ದಾರೆ

Latest Indian news

Popular Stories