ಮಲ್ಪೆಯಲ್ಲಿ ಅಪಘಾತ: ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ ಆಪತ್ಭಾಂಧವ ಈಶ್ವರ ಮಲ್ಪೆ ಮತ್ತು ತಂಡ

ಮಲ್ಪೆಯಿಂದ ಪಡುಕೆರೆ ಸಾಗುವ ದಾರಿ ಮಧ್ಯೆ ಬಾಪುತೋಟ ಧಕ್ಕೆಯ ಸಮೀಪ ಎರಡು ಬೈಕ್ ಮುಖಾಮುಖಿ ಅಪಘಾತ ಸಂಭವಿಸಿ ,ಯುವಕ ತೀವ್ರವಾಗಿ ಗಾಯಗೊಂಡ ಘಟನೆ ರಾತ್ರಿ 8:15 ರ ಸುಮಾರಿಗೆ ನಡೆದಿದೆ.

ಗಾಯಾಳು ಯುವಕನ ಅಜಯ್ (34)ಎಂದು ಗುರುತಿಸಲಾಗಿದ್ದು ,ತಲೆ ಹಾಗೂ ಮುಖದ ಭಾಗಕ್ಕೆ ಗಾಯಗೊಂಡು ರಕ್ತಸ್ರಾವವಾಗುತ್ತಿದ್ದ ಯುವಕನನ್ನು ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ತಮ್ಮ ಆಂಬುಲೆನ್ಸ್ ಮುಖಾಂತರ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಯುವಕನು ಮಲ್ಪೆ ಪಡುಕೆರೆಯಲ್ಲಿರುವ ಪ್ರಕಾಶ್ ಎಂಬವರ ಬೋಟ್ ಬಿಲ್ಡಿಂಗ್ ನಲ್ಲಿ ಕೆಲಸವನ್ನು ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು , ಮನೆಯವರು ಅಥವಾ ಸಂಬಂಧಪಟ್ಟವರು ಈ ಕೂಡಲೇ ಈಶ್ವರ ಮಲ್ಪೆಯವರಿಗೆ 9663434415 ಸಂಪರ್ಕಿಸಿ ಅಥವಾ ಆದರ್ಶ ಆಸ್ಪತ್ರೆಗೆ ತಲುಪಬೇಕಾಗಿ ಈ ಮೂಲಕ ವಿನಂತಿಸಿದ್ದಾರೆ.

Latest Indian news

Popular Stories