ಆದಿ ಉಡುಪಿ: ಹೆದ್ದಾರಿಗೆ ಅಡ್ಡಲಾಗಿ ಬಿದ್ದ ಬೃಹತ್ ಮರ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಹಲವೆಡೆ ಮರ ಬಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದೇ ರೀತಿ ಆದಿ ಉಡುಪಿಯಲ್ಲಿ ಹೆದ್ದಾರಿಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದ ಪರಿಣಾಮ ಮಲ್ಪೆ ರಾ. ಹೆದ್ದಾರಿ ತಾತ್ಕಾಲಿಕ ‌ಬಂದ್ ಆಗಿತ್ತು.

ಮಳೆ, ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಬುಧವಾರ ತಡರಾತ್ರಿ, ಗುರುವಾರ ಮುಂಜಾನೆ ಗಾಳಿ‌ಸಹಿತ ನಿರಂತರ ಮಳೆ ಸುರಿಯುತ್ತಿದ್ದು, ಹಲವೆಡೆ ಸಾಕಷ್ಟು ಹಾನಿ‌ ಸಂಭವಿಸಿದೆ.‌ ವಿಪರೀತ ಗಾಳಿ‌ ಮಳೆಯಿಂದಾಗಿ ತಡರಾತ್ರಿ ಪಂದುಬೆಟ್ಟುವಿನಲ್ಲಿ ಮರವು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಪರಿಣಾಮ ಆರೇಳು ವಿದ್ಯುತ್ ಕಂಬ ಸಹಿತ, ವಿದ್ಯುತ್ ‌ಲೈನ್ ಗಳು‌ ನೆಲಕ್ಕೆ‌ಉರುಳಿ‌ ಹಾನಿ‌ ಸಂಭವಿಸಿದೆ. ಉಡುಪಿ- ಮಲ್ಪೆ ಹೆದ್ದಾರಿ‌ ಸಂಪರ್ಕ ತಾತ್ಕಾಲಿಕ ಬಂದ್ ಆಗಿದ್ದು, ವಾಹನಗಳು ಪರ್ಯಾಯವ ಮಾರ್ಗದಲ್ಲಿ ಸಂಚರಿಸಿದೆ.

ಇದೀಗ ಅರಣ್ಯಾಧಿಕಾರಿಗಳು ಬಿದ್ದ ಮರವನ್ನು ತೆರವುಗೊಳಿಸುತ್ತಿದ್ದಾರೆ.

1001315062 Udupi

Latest Indian news

Popular Stories