‘ಅಪಘಾತ ರಹಿತ ಚಾಲಕ’ ಪ್ರಶಸ್ತಿ ಪುರಸ್ಕತ ಅಲೆಕ್ಸಾಂಡರ್ ಕುಲಾಸೊ ನಿಧನ

ಉದ್ಯಾವರ : ಪರ್ಕಳ – ಮಟ್ಟು ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಂಬರೀಶ್ ಬಸ್ ನಲ್ಲಿ 40ಕ್ಕೂ ಅಧಿಕ ವರ್ಷಗಳ ಕಾಲ ಚಾಲಕರಾಗಿ ನಿರಂತರವಾಗಿ ಸೇವೆ ಸಲ್ಲಿಸಿ, ‘ಅಪಘಾತ ರಹಿತ ಚಾಲಕ ಪ್ರಶಸ್ತಿ’ ಪುರಸ್ಕತರಾಗಿದ್ದ ಉದ್ಯಾವರದ ಅಲೆಕ್ಸಾಂಡರ್ ಕುಲಾಸೊ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಫೆ. 4 ರoದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ಹಾಸ್ಯದ ಮಾತುಗಳ ಮೂಲಕವೇ ಎಲ್ಲರ ಮನ ಗೆಲ್ಲುತ್ತಿದ್ದರು. ಸಿಟಿ ಬಸ್ಸಿನ ಚಾಲಕರಾಗಿದ್ದ ಇವರು ಕೆಲವೇ ವರ್ಷಗಳ ಹಿಂದೆ ತನ್ನ ವೃತ್ತಿಗೆ ನಿವೃತ್ತಿ ಹೇಳಿದ್ದರು. ಬಳಿಕ ರಿಕ್ಷಾ ಚಾಲಕರಾಗಿಯೂ ಗುಡ್ಡೆಯಂಗಡಿ ಬಲಾಯ್ ಪಾದೆ ರಿಕ್ಷಾ ನಿಲ್ದಾಣದಲ್ಲಿ ಸೇವೆ ಸಲ್ಲಿಸಿದ್ದರು.

ಸ್ನೇಹಜೀವಿಯಾಗಿದ್ದ ಮೃತರು, ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯಂದಿರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

Latest Indian news

Popular Stories