ಕೊಪ್ಪಳ, ಜುಲೈ 27: ಬಿಜೆಪಿಯವರಿಗೆ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡೋಕ್ಕಾಗಿಲ್ಲ. ಆದರೆ ಅಂಜನಾದ್ರಿ ಹೆಸರಿನಲ್ಲಿ ರಾಜಕೀಯ ಮಾಡಿದರು. ಬಿಜೆಪಿಯವರು ಪ್ರತಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಆರ್ಪಿಪಿ ಶಾಸಕ ಜನಾರ್ದನ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇವಲ ಬಾಯಿ ಮಾತಿಗೆ ಹಿಂದುತ್ವ ಅಂದರೆ ಸಾಲದು. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ನೀವು ಏನ್ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಸಿಎಂ ಸಿದ್ಧರಾಮಯ್ಯ ಭೇಟಿಯಾಗಿ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದ್ದೇನೆ. ಅಭಿವೃದ್ಧಿ ಮಾಡುವುದಕ್ಕೆ ನಿಮಗೆ ಅವಕಾಶವಿದೆ ಅಂತಾ ಹೇಳಿದ್ದೇನೆ. ಈಗಾಗಲೇ 120 ಕೋಟಿ ಅನುದಾನ ಮೀಸಲಿದೆ ಎಂದರು.