ಉಡುಪಿಯ ಖಾಸಗಿ ಕಾಲೇಜವೊಂದರಲ್ಲಿ ವಿಡಿಯೋ ಚಿತ್ರೀಕರಣದ ವಿಷಯದಲ್ಲಿ ರಾಜಕೀಯ ಸರಿಯಲ್ಲ. ಪೊಲೀಸ್ ಇಲಾಖೆಯು ನ್ಯಾಯಯುತವಾದ ತನಿಖೆ ನಡೆಸುತ್ತದೆ ಎಂಬ ವಿಶ್ವಾಸ ಇದೆ : ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್.

ಕಳೆದ ಒಂದು ವಾರದಿಂದ ಉಡುಪಿ ಖಾಸಗಿ ಕಾಲೇಜವೊಂದರಲ್ಲಿ ವಿಡಿಯೋ ಚಿತ್ರೀಕರಣದ ವಿಷಯದಲ್ಲಿ ಚರ್ಚೆ ನಡೆಯುತ್ತಿದ್ದು ಈ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಪೊಲೀಸ್ ಇಲಾಖೆಯು ನ್ಯಾಯಯುತವಾದ ತನಿಖೆ ನಡೆಸುತ್ತಿದೆ. ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡದೆ ತನಿಖೆಗೆ ಸಹಕಾರ ಮಾಡಬೇಕು. ಸತ್ಯಾಂಶ ಹೊರಬರದೆ ಇದರಲ್ಲಿ ರಾಜಕೀಯ ಲೇಪ ಹಚ್ಚುವುದು ಸಮಂಜಸವಲ್ಲ. ಉಡುಪಿ ಜಿಲ್ಲೆಯು ಶಾಂತಿಪ್ರಿಯವಾದ ಜಿಲ್ಲೆ. ಇಲ್ಲಿ ವಿದ್ಯಾರ್ಥಿಗಳ ಮಧ್ಯೆ ಕೋಮು ಬೀಜ ಬಿತ್ತುವುದು ಸರಿಯಲ್ಲ. ಪೊಲೀಸ್ ಇಲಾಖೆಯು ಸಮರ್ಥವಾಗಿದೆ. ಸರಿಯಾದ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ನಮಗಿದೆ. ತನಿಖೆಯ ಸತ್ಯಾಸತ್ಯತೆ ಹೊರಬರುವ ತನಕ ತಾಳ್ಮೆಯಿಂದ ಎಲ್ಲರೂ ಸಹಕರಿಸಬೇಕೆಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

Latest Indian news

Popular Stories