ಕಾರ್ಕಳ: ಬೀಡಿ ಕಾರ್ಮಿಕರ ಪ್ರತಿಭಟನೆ

ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘ(ರಿ)( ಸಿಐಟಿಯು)ನೇತ್ರತ್ವದಲ್ಲಿ ಇಂದು ಕಾರ್ಕಳ ಮಿನಿ ವಿಧಾನ ಸೌಧ ಮುಂದೆ ಬೀಡಿ ಕಾರ್ಮಿಕರ ತುಟ್ಟಿಭತ್ಯೆ, ಕನಿಷ್ಠ ಕೂಲಿ ಹಾಗೂ ಪ್ರಮುಖ 12ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ತಹಶಿಲ್ದಾರರ ಮುಖಾಂತರ ಸರಕಾರದ ಮುಖ್ಯಮಂತ್ರಿ ಯವರಿಗೆ ಪ್ರತಿಭಟನೆ ನಡೆಸಿ ಮನವಿ ನೀಡಲಾಯಿತು. ಪ್ರತಿಭಟನೆಯಲ್ಲಿ ರಾಜ್ಯ ಬೀಡಿ ಫೆಡರೇಶನ್ ನ ಉಪಾಧ್ಯಕ್ಷ ರಾದ ವಕೀಲರು ಕಾಂ.ಬಿಎಮ್ ಭಟ್ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ನ ಅಧ್ಯಕ್ಷ ರಾದ ಮಹಾಬಲಹೊಡೆಯರ ಹೋಬಳಿ, ಕಾರ್ಯದರ್ಶಿ ಉಮೇಶ್ ಕುಂದರ್,ಮುಖಂಡರಾದ ಬಲ್ಕೀಸ್,ನಳಿನಿ ಕಾರ್ಕಳ ಬೀಡಿ ಸಂಘದ ಅಧ್ಯಕ್ಷ ರಾದ ಸುನೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್,ಕೋಶಾಧಿಕಾರಿ ಸುಮತಿ,ಬೆಳ್ತಂಗಡಿ ತಾಲೂಕು ಬೀಡಿ ಸಂಘದ ಕಾರ್ಯದರ್ಶಿ ಈಶ್ಚರಿ,ಜೈಬೀಮ್ ಸಂಘದ ಮುಖಂಡರಾದ ಸಂಜೀವ ಪಳ್ಳಿ,ಕಾರ್ಕಳ ಸಿಐಟಿಯು ಮುಖಂಡರರಾದ ನಾಗೇಶ್,ಹಾಗೂ ಕಾರ್ಕಳ ಬೀಡಿ ಸಂಘದ ಮುಖಂಡರಾದ ಜಯಂತಿ, ವೇದವತಿ,ಪುಷ್ಪವತಿ,ಶಕುಂತಳ,ಗೀತಾ,ವನಿತ ಉಪಸ್ಥಿತರಿದ್ದರು.

Latest Indian news

Popular Stories