
Udupi
ಮಣಿಪಾಲ: ಬೈಕ್ ಕಳ್ಳತನ ಮಾಡುವ ಕೃತ್ಯ ಸಿಸಿಟಿವಿಯಲ್ಲಿ ಸೆರೆ
ಉಡುಪಿ, ನ.27: ಹಗಲು ಹೊತ್ತಿನಲ್ಲಿ ಯುವಕನೋರ್ವ ಬೈಕ್ ಕಳ್ಳತನ ಮಾಡಿರುವ ಘಟನೆ ಮಣಿಪಾಲ ನಗರದ ಹೃದಯಭಾಗದಲ್ಲಿ ನ.27 ಸೋಮವಾರ ನಡೆದಿದೆ.
ಮಣಿಪಾಲ ಆಸ್ಪತ್ರೆ ಎದುರು ಬೈಕ್ ನಿಲ್ಲಿಸಲಾಗಿತ್ತು.
ಯುವಕ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಾ ಬೈಕ್ ಬಳಿ ಬಂದಿದ್ದಾನೆ. ಅನಾಯಾಸವಾಗಿ ಕೈ ಬೀಗ ಒಡೆದು ವಾಹನದ ಮಾಲೀಕ ಎಂಬಂತೆ ಬೈಕ್ ಚಲಾಯಿಸಿದ್ದಾನೆ.
ಬೈಕ್ ನೋಂದಣಿ ಸಂಖ್ಯೆ KA 20 J 2276 ಮತ್ತು ಹೀರೋ ಹೋಂಡಾ ಸ್ಪ್ಲೆಂಡರ್ ಆಗಿದೆ. ಈ ಸಂಪೂರ್ಣ ಕೃತ್ಯ ಸಮೀಪದ ಮಾಲ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.




