ಬೈಂದೂರು ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಕಾಂಗ್ರೆಸ್ ಸೇರ್ಪಡೆ ಫಿಕ್ಸ್? – ಡಿಕೆಶಿ ಜೊತೆ ಫೋಟೊ ವೈರಲ್!

ಬೈಂದೂರು ಕ್ಷೇತ್ರದ ಅಭ್ಯರ್ಥಿಯಾಗಿ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದ ಸುಕುಮಾರ್ ಶೆಟ್ಟಿ ಇದೀಗ ಡಿಕೆಶಿಯೊಂದಿಗೆ ನಿಂತಿರುವ ಫೋಟೊ ವೈರಲಾಗಿದ್ದು ಕಾಂಗ್ರೆಸ್ ಸೇರ್ಪಡೆ ಬಹುತೇಕ ಫಿಕ್ಸ್ ಆಗಿದೆ.

ಗೋಪಾಲ್ ಪೂಜಾರಿ ಜೊತೆ ಹೋಗಿರುವ ಸುಕುಮಾರ್ ಶೆಟ್ಟಿಯವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎನ್ನಲಾಗಿದೆ. ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡದ ಅವರು ಗೋಪಾಲ್ ಪೂಜಾರಿ ಪರ ಕೆಲಸ ಮಾಡಿದ್ದರು ಎನ್ನಲಾಗಿದೆ.

ಇದೀಗ ಕಾಂಗ್ರೆಸ್ ಸೇರ್ಪಡೆಗೊಂಡು ಮತ್ತೆ ಯಾವುದಾದರೂ ಹುದ್ದೆ ಪಡೆಯುವ ಸಾಧ್ಯತೆ ಮೇಲ್ನೋಟಕ್ಕೆ ಕಂಡು ಬಂದಿದೆ.

Latest Indian news

Popular Stories