ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತದ ಭೀತಿ, ವಾಹನ ಸವಾರರಲ್ಲಿ ಆತಂಕ

ಉಡುಪಿ: ಅವೈಜ್ಞಾನಿಕ ಕಾಮಗಾರಿ ಹಿನ್ನೆಲೆ ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಂಪರ್ಕ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 66 (Byndoor National Highway 66) ರಲ್ಲಿ ಗುಡ್ಡ ಕುಸಿತವಾಗುವ (Landslides) ಸಾಧ್ಯತೆ ಇದೆ.

ಬೈಂದೂರು ತಾಲೂಕಿನ ಶಿರೂರು ಒತ್ತಿನೆಣೆಯಲ್ಲಿ ಪ್ರತಿ ಬಾರಿ ಮಳೆಗಾಳದಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದ್ದು, ಈ ಬಾರಿಯೂ ಗುಡ್ಡ ಕುಸಿತವಾಗುವ ಸಂಭವಿರುವುದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.

ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಾಷ್ಟ್ರೀಯ ಹೆದ್ದಾರಿಯು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಸಂಪರ್ಕ ಕೊಂಡಿಯಾಗಿದೆ. ಕುಂದಾಪುರದಿಂದ ಕಾರವಾರದ ಮಾಜಾಳಿವರೆಗೂ ಐಆರ್​ಬಿ ಕಂಪೆನಿಯಿಂದ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಪರ್ಯಾಯ ಸ್ಥಳವಿದ್ದರೂ ಒತ್ತಿನೆಣೆಯಲ್ಲಿ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಅಷ್ಟೇ ಅಲ್ಲದೆ, ಸ್ಥಳೀಯರ ಸಲಹೆ ಪಡೆಯದೆ ಗುಡ್ಡಕ್ಕೆ ಸಮೀಪವಾಗಿ ಹೆದ್ದಾರಿ ನಿರ್ಮಿಸಲಾಗಿದೆ.

ಇದರಿಂದಾಗಿ ಪ್ರತಿ ವರ್ಷ ಮಳೆಗಾಲದಲ್ಲಿ ಒತ್ತಿನೆಣೆಯಲ್ಲಿ ಗುಡ್ಡ ಜರಿಯುವುದು ಸಾಮಾನ್ಯವಾಗಿದೆ. ಹೆದ್ದಾರಿ ಕಾಮಗಾರಿ ವೇಳೆಯೂ ಗುಡ್ಡ ಜರಿದಿತ್ತು. ಈ ಬಾರಿ ಸುರಿದ ಮಳೆಗೂ ಗುಡ್ಡ ಜರಿದು ಆತಂಕ ಸೃಷ್ಟಿಯಾಗಿತ್ತು. ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ ಮೇಲೆ ಬೀಳುತ್ತಿರುವುದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ.

Latest Indian news

Popular Stories