ಪ್ರಿಂಟರ್ಸ್ ಅಸೋಸಿಯೇಶನ್‌ನಿಂದ ಮುದ್ರಕರ ದಿನಾಚರಣೆ ಮತ್ತು ಹಿರಿಯ ಮುದ್ರಕರಿಗೆ ಸನ್ಮಾನ

ಉಡುಪಿ : ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ) ಇದರ ವತಿಯಿಂದ ಫೆಬ್ರವರಿ 24ರಂದು ಸಂಜೆ ಉಡುಪಿ ಪುರಭವನದಲ್ಲಿ “ಮುದ್ರಕರ ದಿನಾಚರಣೆ” ಕಾರ್ಯಕ್ರಮ ಜರಗಿತು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಶ್ರೀ ಬನ್ನಂಜೆ ಬಾಬು ಅಮೀನ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿಯವರಾದ ಶ್ರೀ ಕುಮಾರ್ ಬಿ. ಆರ್. ಮತ್ತು ಗ್ಯಾಲಕ್ಸಿ ಇಮೇಜಿಂಗ್ ಟೆಕ್ನಾಲಜೀಸ್ ಬೆಂಗಳೂರು ಇದರ ಬಿಸಿನೆಸ್ ಮೆನೇಜರ್ ಶ್ರೀ ಎನ್. ಮೋಹನ್‌ರವರು ಮುಖ್ಯ ಅತಿಥಿಗಳಾಗಿದ್ದರು.

ಕರ್ನಾಟಕ ರಾಜ್ಯ ಮುದ್ರಣಕಾರರ ಸಮನ್ವಯ ಸಮಿತಿಯ ಸಂಚಾಲಕರಾದ ಶ್ರೀ ಮಹೇಶ್ ಕುಮಾರ್, ಸಹಸಂಚಾಲಕರಾದ ಶ್ರೀ ಅಶೋಕ್ ಶೆಟ್ಟಿ ಮತ್ತು ಮುದ್ರಕರ ಸೌಹಾರ್ದ ಸಹಕಾರಿ ಸಂಘ ನಿ. ಉಡುಪಿ ಇದರ ಅಧ್ಯಕ್ಷರಾದ ಶ್ರೀ ಬಿ. ಜಿ. ಸುಬ್ಬರಾವ್ ಸಂದರ್ಭೋಚಿತವಾಗಿ ಮಾತನಾಡಿದರು.

ಮುದ್ರಣಾಲಯದ ಹಿರಿಯ ಮಾಲಕರೆಂಬ ನೆಲೆಯಲ್ಲಿ ಬೈಂದೂರು ಉಪ್ಪುಂದದ ವಿನಾಯಕ ಪ್ರಿಂಟರ್ಸ್ ಮಾಲಕರಾದ ಶ್ರೀ ಗೋಪಾಲ ಶೆಟ್ಟಿ ರವರನ್ನು ಸನ್ಮಾನಿಸಲಾಯಿತು. ಸಂಘದ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ಉದ್ಯಾವರ ಇವರು ಸನ್ಮಾನಪತ್ರ ವಾಚಿಸಿದರು.

ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ಪ್ರಕಾಶ್ ಕೊಡವೂರು ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಲಯಗಳ ಅಧ್ಯಕ್ಷರುಗಳಾದ ಶ್ರೀ ಪ್ರಶಾಂತ್ ನಾಯ್ಕ್, ಶ್ರೀ ಹೆಚ್. ವಾಸುದೇವ ವರ್ಣ, ಶ್ರೀ ಪ್ರವೀಣ್ ಶೆಣೈ ಮತ್ತು ಶ್ರೀ ಸುಧೀರ್ ಡಿ. ಬಂಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆರಂಭದಲ್ಲಿ ಕುಮಾರಿ ಕೃತಿ ಎಸ್. ಆಚಾರ್ಯ ಪ್ರಾರ್ಥನೆ ಮಾಡಿದರು. ಇತ್ತೀಚೆಗೆ ಮೃತರಾದ ಮುದ್ರಣಾಲಯಗಳ ಮಾಲಕರ ಸದ್ಗತಿಗಾಗಿ ಮೌನ ಪ್ರಾರ್ಥನೆ ಮಾಡಲಾಯಿತು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ರಮೇಶ್ ತಿಂಗಳಾಯ ರವರು ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿಯವರಾದ ಜಿ. ಎಂ. ಶರೀಫ್ ಧನ್ಯವಾದವಿತ್ತರು. ಉಡುಪಿ ವಲಯ ಕಾರ್ಯದರ್ಶಿಯವರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.

Latest Indian news

Popular Stories