ಸ್ಟೂಡೆಂಟ್ ಫಾರ್ ಡೆವಲಪ್ಮೆಂಟ್ ಮತ್ತು ವೈಕುಂಠ ಬಾಳಿಗ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಸ್ಟೂಡೆಂಟ್ ಫಾರ್ ಡೆವಲಪ್ಮೆಂಟ್ ಉಡುಪಿ ವತಿಯಿಂದ ವೈಕುಂಠ ಬಾಳಿಗ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಭಾಗಿತ್ವದೊಂದಿಗೆ ಒಂದು ದಿನದ ಬೀಚ್ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಜಲ್, ಜಂಗಲ್, ಜಮೀನ್, ಜನ್, ಜಾನುವಾರ್ ಈ ಐದು ಧ್ಯೇಯದೊಂದಿಗೆ ದೇಶಾದ್ಯಂತ ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಮತ್ತು ಜಾಗೃತಿ ಅಭಿಯಾನಗಳನ್ನು ಎಸ್.ಎಫ್.ಡಿ ಮಾಡಿಕೊಂಡು ಬರುತ್ತಿದೆ ಇವತ್ತು ಅದರ ಅಂಗವಾಗಿ ಇಂದು ಮಲ್ಪೆಯ ಕಡಲ ಕಿನಾರೆಯಲ್ಲಿ ಬೀಚ್ ಸ್ವಚ್ಛತೆಯನ್ನು ನಡೆಸಲಾಯಿತು.

ಸ್ವಚ್ಛತೆಯಲ್ಲಿ 50ಕ್ಕು ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜು ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ನವೀನ್ ಸಿ.ಬಿ, ಉಡುಪಿ ನಗರ ಎಸ್.ಎಫ್.ಡಿ ಪ್ರಮುಖ್ ವಸುದೇವ್ ತಿಲಕ್, ಕಾಲೇಜು ಘಟಕ ಎಸ್.ಎಫ್.ಡಿ ಪ್ರಮುಖ್ ಹೇಮಂತ್ ಶೆಣೈ, ಸಹ ಪ್ರಮುಖ್ ದಿವ್ಯ ಮತ್ತು ಕಾಲೇಜು ಘಟಕ ಎನ್.ಎಸ್.ಎಸ್ ಕಾರ್ಯದರ್ಶಿಗಳಾದ ಭರತ್ ಮತ್ತು ಸುಮಾ ಭಾಗವಹಿಸಿದರು.

Latest Indian news

Popular Stories