ಕರಾವಳಿಯಲ್ಲಿ ಮಳೆ ಕೊರತೆ: ಬಿಸಿಲ ಬೇಗೆಗೆ ಬೆಸೆತ್ತ ಜನ

ಉಡುಪಿ: ಕರಾವಳಿಯಲ್ಲಿ ಈ ಬಾರಿ ಜುಲೈ ತಿಂಗಳೊಂದು ಬಿಟ್ಟರೆ ವಾಡಿಕೆಯಂತೆ ಮಳೆಯಾಗಿಲ್ಲ. ಬಿಸಿಲ ಬೇಗೆ ಬೇಸಿಗೆಯಂತೆ ಜನರನ್ನು ಕಾಡುತ್ತಿದೆ.

ಆಗಸ್ಟ್‌ ತಿಂಗಳಿನಲ್ಲಿ ಮಳೆಯೇ ಇಲ್ಲದಂತಾಗಿದ್ದು, ಇಲ್ಲಿ ಬಿಸಿಲಿನ ಧಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 2 ವಾರದ ಬಿಸಿಲಿನ ತಾಪಮಾನಕ್ಕೆ ಬೇಸತ್ತ ಇಲ್ಲಿನ ಜನ ಇದೀಗ ಮಳೆರಾಯನ ಆಗಮನಕ್ಕೆ ಕಾದುಕುಳಿತಿದ್ದಾರೆ.

ಇದೇ ರೀತಿಯಲ್ಲಿ ಮಳೆಗಾಲ ಮಳೆ ಬಾರದೆ ಮುಗಿದು ಹೋದರೆ ಕರಾವಳಿ ಭಾಗದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಇನ್ನು ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದಲೇ ಮಳೆ ಅಬ್ಬರಿಸುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ವರದಿ ನೀಡಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಆಗಸ್ಟ್‌ 20ರ ಬಳಿಕ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

Latest Indian news

Popular Stories