ಪ್ರವಾಸಿ ಸ್ಥಳಗಳಿಗೆ ಪ್ರವೇಶ ನಿರ್ಬಂಧ: ಸೆ. 15ರ ವರೆಗೂ ವಿಸ್ತರಣೆ: ಜಿಲ್ಲಾಧಿಕಾರಿ

ಉಡುಪಿ: ಜಿಲ್ಲೆಯ ಪ್ರವಾಸೋದ್ಯಮ ಸ್ಥಳ ಹಾಗೂ ಬೀಚ್‌, ಸಮುದ್ರತೀರ ಸಹಿತ ಮಳೆಗಾಲದಲ್ಲಿ ಅಪಾಯಕಾರಿ ಪ್ರದೇಶಗಳಿಗೆ ಪ್ರವಾಸಿಗರ ಭೇಟಿಗೆ ಜಿಲ್ಲಾಡಳಿತ ಹೇರಿರುವ ನಿರ್ಬಂಧವನ್ನು ಸೆ. 15ರ ವರೆಗೂ ವಿಸ್ತರಿಸಲಾಗಿದೆ.

ಸೆಪ್ಟಂಬರ್‌ ಮೊದಲ ವಾರದಲ್ಲಿ ಮಳೆ ಬರುವ ಸಾಧ್ಯತೆ ಇರುವುದರಿಂದ ಎಲ್ಲ ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದೇವೆ.

ಈ ಬಗ್ಗೆ ಅಧಿಕಾರಿಗಳ ಜತೆಗೂ ಚರ್ಚೆ ನಡೆಸಲಿದ್ದೇವೆ. ಆಗುಂಬೆ ಘಾಟಿಯಲ್ಲಿ ದೊಡ್ಡ ವಾಹನ ಸಂಚಾರ ನಿಷೇಧ ತೆರವು ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಯವರೊಂದಿಗೂ ಚರ್ಚೆ ಮಾಡಲಿದ್ದೇವೆ.

ಸೆ. 15ರ ವರೆಗೂ ಎಲ್ಲ ನಿರ್ಬಂಧ ಮುಂದುವರಿಯಲಿದೆ. ಅನಂತರ ಮಳೆಯ ಪರಿಸ್ಥಿತಿ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಅವರು ಮಾಹಿತಿ ನೀಡಿದ್ದಾರೆ.

Latest Indian news

Popular Stories