ಉಡುಪಿ | ಖಾಸಗಿ ಕಟ್ಟಡದಲ್ಲಿ ವ್ಯಕ್ತಿಯ ಶವ ಕೊಳತ ಸ್ಥಿತಿಯಲ್ಲಿ ಪತ್ತೆ.

ಉಡುಪಿ, ನ.29; ಇಂದ್ರಾಳಿಯ ದೇವಸ್ಥಾನ ರಸ್ತೆಯಲ್ಲಿ ಖಾಸಗಿಯವರ ಕಟ್ಟಡದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವ್ಯಕ್ತಿ ಮೃತಪಟ್ಟು ಮೂರು ದಿನಗಳು ಕಳೆದಿರಬಹುದು, ಹೃದಯಾಘಾತದಿಂದ ಸಾವು ಸಂಭವಿಸಿರ ಬಹುದೆಂಬ ಶಂಕೆ ವ್ಯಾಕ್ತವಾಗಿದೆ. ವಾಸನೆ ಹಬ್ಬಿದರಿಂದ ಸ್ಥಳೀಯರಿಗೆ ವ್ಯಕ್ತಿ ಮೃತಪಟ್ಟಿರುವುದು ಮಂಗಳವಾರ ರಾತ್ರಿ ಗಮನಕ್ಕೆ ಬಂದಿದೆ.

ಮೃತ ವ್ಯಕ್ತಿಯ ಬಳಿ ಲಭಿಸಿದ ಆಧಾರ್ ಚೀಟಿಯಲ್ಲಿ ಹೆಸರು ಶರಣ್ ಶಿವ ಶೆಟ್ಟಿ ಮುಂಬೈಯಿಯ ವಿಳಾಸ ಇರುವುದು ಕಂಡುಬಂದಿದೆ. ಮಣಿಪಾಲ ಪೋಲಿಸ್ ಎ.ಎಸ್.ಐ ಠಾಣೆಯ ಗಂಗಪ್ಪ, ಸಿಬ್ಬಂದಿಗಳಾದ ಪ್ರಸನ್ನ ರೇವಣ್ಣ, ಕಾನೂನು ಪ್ರಕ್ರಿಯೆ ನಡೆಸಿದರು. ಮಣಿಪಾಲದ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಶವ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಇಲಾಖೆಗೆ ನೆರವಾದರು.

Latest Indian news

Popular Stories