ಉಡುಪಿ: ಉಡುಪಿ ತಾಲೂಕು ಕಛೇರಿಗೆ ಸಂಬಂಧಪಟ್ಟ ಬನ್ನಂಜೆಯ ಗಾಂಧಿ ಭವನದಲ್ಲಿ ಇಡಲಾದ ದಾಖಲೆಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ.
ಗಾಂಧಿ ಭವನದಲ್ಲಿ ತಾಲೂಕು ಕಚೇರಿಯ ದಾಖಲೆಗಳನ್ನು ಹಿಂದಿನಿಂದಲೂ ಶೇಖರಿಸಿಡುತ್ತಿದ್ದು, ಆ.15ರಿಂದ ಸೆ.26ರ ನಡುವೆ ಗಾಂಧಿ ಭವನದ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಒಳಗೆ ಜೋಡಿಸಿಟ್ಟಿದ್ದ ದಾಖಲೆಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ