ಗಣೇಶೋತ್ಸವ ಮೆರವಣಿಗೆಯಲ್ಲಿ ಡಾನ್ಸ್​ ಮಾಡುತ್ತಿದ್ದ ಮಹಿಳೆ ಕುಸಿದು ಬಿದ್ದು ಸಾವು

ರಾಯಚೂರು :ಗಣೇಶೋತ್ಸವ ಮೆರವಣಿಗೆಯೊಂದರಲ್ಲಿ ಡಾನ್ಸ್ ಮಾಡುತ್ತಿದ್ದ ಮಹಿಳೆಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಮೃತಪ್ಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಅನಂತಮ್ಮ ಎಂಬ ಮಹಿಳೆಗೆ 56 ವರ್ಷ ವಯಸ್ಸಾಗಿತ್ತು ಎನ್ನಲಾಗಿದ್ದು ಮೆರವಣಿಗೆಯಲ್ಲಿ ತಮಿಳು ಹಾಡಿಗೆ ಡಾನ್ಸ್ ಮಾಡುತ್ತಿದ್ದ ವೇಳೆ ಮಹಿಳೆಗೆ ಎದೆ ನೋವು ಕಾಣಿಸಿಕೊಂಡಿದ್ದು ಇದ್ದಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.ರಾಯಚೂರಿನ ಮಾರ್ಕೆಟ್ ಯಾರ್ಡ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories