UdupiFeatured Story

ಚಂದ್ರ ದರ್ಶನ: ಕರಾವಳಿಯಾದ್ಯಂತ ನಾಳೆ (ಬುಧವಾರ) ಈದ್ ಉಲ್ ಫಿತ್ರ್ ಆಚರಣೆ

ಉಡುಪಿ/ದ.ಕ:ಇಸ್ಲಾಮಿಕ್ ಕ್ಯಾಲೆಂಡರ್ ಶವ್ವಾಲ್ ತಿಂಗಳ ಚಂದ್ರ ದರ್ಶನವಾದ ಕಾರಣ ಮುಸ್ಲಿಂ ಬಾಂಧವರು ಕರಾವಳಿಯಾದ್ಯಂತ ಎಪ್ರಿಲ್ 10 ನಾಳೆ (ಬುಧವಾರ) ಈದುಲ್ ಫಿತ್ರ್ ಹಬ್ಬವನ್ನು ಆಚರಿಸಲಿದ್ದಾರೆ.

ಚಂದ್ರ ದರ್ಶನದೊಂದಿಗೆ ರಂಝಾನ್ ಉಪವಾಸ ಆಚರಣೆ ಕೊನೆಗೊಳಲಿದ್ದು ನಾಳೆ ಮುಸ್ಲಿಂ ಬಾಂಧವರು ಸಂಭ್ರಮದ ದಾನ ಧರ್ಮಗಳ ಹಬ್ಬ ಈದ್ ಉಲ್ ಫಿತರ್ ಹಬ್ಬ ಆಚರಿಸಲಿದ್ದಾರೆ. ಹೊಅ ಉಡುಪುಗಳನ್ನು ಧರಿಸಿ ಮಸೀದಿ/ಈದ್ಗಾಗಳಿಗೆ ಹೋಗಿ ಈದ್ ನಮಾಝ್ ನಿರ್ವಹಿಸಲಿದ್ದಾರೆ. ಇದೀಗ ಚಂದ್ರದರ್ಶನದ ನಂತರ ಪ್ರತಿಯೊಬ್ಬ ಮುಸ್ಲಿಮ್ ಫಿತ್ರ್ ಝಕಾತ್ ಹಣವನ್ನು ತೆಗೆದು ಬಡವರಿಗೆ ಹಂಚಲಿದ್ದಾರೆ. ಈ ಮೂಲಕ ಅರ್ಥಿಕವಾಗಿ ಹಿಂದುಳಿದ ಜನರು ಹಬ್ಬ ಆಚರಿಸುವುದನ್ನು ಖಾತ್ರಿ ಪಡಿಸಲಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button