Udupi

ನಕಲಿ‌ ಕ್ಲಿನಿಕ್‌ಗಳಿಗೆ ಬಿಸಿ ಮುಟ್ಟಿಸುತ್ತಿರೊ ಅರೋಗ್ಯ ಇಲಾಖೆ ಅಧಿಕಾರಿಗಳು

ಗಡಿಜಿಲ್ಲೆ ಬೀದರ್‌ನಲ್ಲಿ ನಕಲಿ ವೈದ್ಯರ ಹಾವಳಿ ತಡೆಗಟ್ಟಲು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಮುಂದಾಗಿದ್ದು, ನಕಲಿ‌ ಕ್ಲಿನಿಕ್‌ಗಳ ಮೇಲೆ ದಾಳಿ ಮುಂದುವರೆಸಿದ್ದಾರೆ.

IMG 20231216 WA0015 Udupi

ಮೊನ್ನೆಯಷ್ಟೇ ಔರಾದ್‌ ತಾಲೂಕಿನಲ್ಲಿ‌ ದಾಳಿ ನಡೆಸಿ 5 ಕ್ಲಿನಿಕ್‌ಗಳನ್ನ ಬಂದ್ ಮಾಡುವಂತೆ‌ ನೋಟಿಸ್ ನೀಡಿದ್ದ, ಅಧಿಕಾರಿಗಳು ಇಂದು ಬಸವಕಲ್ಯಾಣದ ಲಾಡವಂತಿ‌ ಗ್ರಾಮದಲ್ಲಿ ಕಲ್ಕತ್ತಾ ಮೂಲದ ವೈದ್ಯ ನಡೆಸುತ್ತಿದ್ದ ಕ್ಲಿನಿಕ್‌ ಮೇಲೆ‌ ದಾಳಿ‌ ನಡೆಸಿ ನೊಟೀಸ್ ನೀಡಿದ್ದಾರೆ..

ತಾಲೂಕಾ ಆರೋಗ್ಯ ಅಧಿಕಾರಿ ಡಾ.ಅಶೋಕ ಮೈಲಾರೆ ಹಾಗೂ ಜಿಲ್ಲಾ ಕೆ.ಪಿ.ಎಂ.ಇ ನೋಡಲ್ ಅಧಿಕಾರಿ ಡಾ.ದಿಲೀಪ ಡೋಂಗ್ರೆ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ‌ ನಡೆಸಿದರು.

ಲಾಡವಂತಿ ಗ್ರಾಮದಲ್ಲಿ ಕಲ್ಕತ್ತಾ ಮೂಲದ ನಕಲಿ ವೈದ್ಯ ಹರಿಕೃಷ್ಣ ಎಂಬ ವ್ಯಕ್ತಿ ನಡೆಸುತ್ತಿದ್ದ ಕ್ಲಿನಿಕ್ ಮೇಲೆ ದಾಳಿ ನಡೆಸಿ ಸೀಜ್ ಮಾಡಲು ಮುಂದಾದಾಗ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಗ್ರಾಮಸ್ಥರಿಗೆ ನಕಲಿ ವೈದ್ಯ ನೀಡುತ್ತಿರುವ ಚಿಕಿತ್ಸೆಯಿಂದಾಗುವ ದುಷ್ಪರಿಣಾಮದ ಕುರಿತು ಗ್ರಾಮಸ್ಥರಿಗೆ ಮನವೊಲಿಸಿ ನಕಲಿ ವೈದ್ಯನಿಗೆ ನೊಟೀಸ್ ನೀಡಿ ಕ್ಲಿನಿಕ್ ಸೀಜ್ ಮಾಡಿದ್ದಾರೆ.

ಹನಮಂತ ದೇಶಮುಖ
THG ಬೀದರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button