ಕಡಬ: ಕಾರು-ಸ್ಕೂಟರ್ ಅಪಘಾತ: ಬಾಲಕ ಮೃತ್ಯು

ಪುತ್ತೂರು: ಕಡಬದ ಕಳಾರ ಮಸೀದಿ ಬಳಿ ಶುಕ್ರವಾರ ರಾತ್ರಿ ನಡೆದ ಕಾರು- ಸ್ಕೂಟರ್ ನಡುವಿನ ಅಪಘಾತದಲ್ಲಿ ಶಾಲಾ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಕಳಾರದ ಚಂದ್ರಶೇಖರ ಎಂಬವರ ಪುತ್ರ, ಸರಸ್ವತಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿ ಬಿಪಿನ್ ಮೃತ ವಿದ್ಯಾರ್ಥಿ.
ತನ್ನ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ತಂದೆ ಮತ್ತು ತಂಗಿಯೊಂದಿಗೆ ಸ್ಕೂಟರ್‌ನಲ್ಲಿ ಹಿಂದಿರುಗುವಾಗ ಮನೆ ಸಮೀಪ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಬಾಲಕ ಬಿಪಿನ್ ಮೃತಪಟ್ಟರೆ ತಂದೆ ಮತ್ತು ತಂಗಿಗೆ ಗಾಯಗಳಾಗಿದೆಯೆಂದು ತಿಳಿದು ಬಂದಿದೆ.

ಅಪಘಾತಗೊಳಿಸಿದ ಕಾರನ್ನು ಪಂಜದ ಪರಮೇಶ್ವರ ಎಂಬವರು ಚಲಾಯಿಸುತ್ತಿದ್ದರೆಂದು ತಿಳಿದು ಬಂದಿದೆ.
ಪರಮೇಶ್ವರ ಕುಡಿದು ಕಾರು ಚಲಾಯಿಸಿದ್ದರೆಂದು ಆರೋಪಿಸಲಾಗಿದ್ದು, ಪೂರಕವೆಂಬಂತೆ ಕಾರಿನಲ್ಲಿ ಮದ್ಯದ ಬಾಟಲಿ, ಸಿಗರೇಟ್ ಪ್ಯಾಕ್‌ಗಳು ಪತ್ತೆಯಾಗಿದೆ.
ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories