ಹೆಬ್ರಿ, ಫೆ.25: ಕ್ಷುಲ್ಲಕ ಕಾರಣಕ್ಕಾಗಿ ತಂದೆ ತನ್ನ ಮಗನನ್ನು ಕೊಲೆಗೈದ ಘಟನೆ ಫೆ.24ರಂದು ರಾತ್ರಿ 9ಗಂಟೆ ಸುಮಾರಿಗೆ ವರಂಗ ಗ್ರಾಮದ ಮೂಡುಬೆಟ್ಟು ಎಂಬಲ್ಲಿ ನಡೆದಿದೆ.
ವರಂಗ ಗ್ರಾಮದ ಮೂಡಬೆಟ್ಟು ನಿವಾಸಿ ಸತೀಶ್ ಪೂಜಾರಿ(40) ಕೊಲೆ ಯಾಗಿದ್ದು, ಕೊಲೆ ಆರೋಪಿಯನ್ನು ತಂದೆ ಕುಟ್ಟಿ ಪೂಜಾರಿ ಎಂದು ಗುರುತಿಸಲಾಗಿದೆ. ಇವರಿಬ್ಬರು ಪ್ರತಿದಿನ ಮದ್ಯಪಾನ ಮಾಡಿ ಗಲಾಟೆ ಮಾಡಿ ಕೊಳ್ಳುತ್ತಿದ್ದು, ರಾತ್ರಿ ವೇಳೆ ಸತೀಶ ಪೂಜಾರಿಯು ವಿಪರೀತ ಮದ್ಯಪಾನ ಸೇವಿಸಿ ಬಂದಿದು, ಕುಟ್ಟಿ ಪೂಜಾರಿ ಮಲಗಿದ್ದ ಕೋಣೆಗೆ ನುಗ್ಗಿ, ಅವರನ್ನು ಮನೆಯ ಹೊರಗೆ ಅಂಗಳಕ್ಕೆ ಎಳೆದು ತಂದರು.
ಇದರಿಂದ ಕೋಪಗೊಂಡ ಕುಟ್ಟಿ ಪೂಜಾರಿ ಅಡುಗೆ ಕೋಣೆಯಲ್ಲಿದ್ದ ಒಲೆ ಬೆಂಕಿ ಊದುವ ಕಬ್ಬಿಣದ ಕೊಳವೆಯಿಂದ ಸತೀಶ ಪೂಜಾರಿಯ ಕೈಕಾಲುಗಳಿಗೆ ಹಲ್ಲೆ ನಡೆಸಿದರು. ಇದರ ಪರಿಣಾಮ ಸತೀಶ ಪೂಜಾರಿ ಮೃತಪಟ್ಟಿರುವುದಾಗಿ ದೂರಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ